ದೇರಳಕಟ್ಟೆ: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯ

ಮಂಗಳೂರು, ಜ.21: ದೇರಳಕಟ್ಟೆಯ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಘಟಕ ಆರಂಭಗೊಂಡಿದೆ.
ನಿಟ್ಟೆ ಪರಿಗಣಿತ ವಿವಿಯ ಕುಲಪತಿ ಎನ್. ವಿನಯ ಹೆಗ್ಡೆ ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ರೊಬೊಟಿಕ್ ಸರ್ಜರಿ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘‘ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಸಮಾಜದ ಎಲ್ಲಾ ವರ್ಗಗಳಿಗೆ ಗುಣ ಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಈ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ವ್ಯವಸ್ಥೆ ಯೊಂದಿಗೆ ರೋಗಿಗಳಿಗೆ ಲಭ್ಯವಿರುವ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು.
ಸುಧಾರಿತ ರೊಬೊಟಿಕ್ ಶಸ್ತ್ರಚಿಕಿತ್ಸಾ ಸೌಲಭ್ಯವು ಕನಿಷ್ಠ ನೋವು, ಕಡಿಮೆ ರಕ್ತದ ನಷ್ಟ, ಶೀಘ್ರ ಚೇತರಿಕೆ ನೀಡುವ ನಿಟ್ಟಿ ನಲ್ಲಿ ವಿನ್ಯಾಸಗೊಳಿಸಲಾಗಿದೆ. ಆಸ್ಪತ್ರೆಯ ರೋಬೋಟಿಕ್ ಶಸ್ತ್ರಚಿಕಿತ್ಸಾ ಘಟಕ ಯುಎಸ್ ಮೂಲದ ಸರ್ಜಿಕಲ್ ರೋಬೋಟ್ ‘ಡಾವಿನ್ಸಿ’ ಯೊಂದಿಗೆ ಸಜ್ಜುಗೊಂಡಿದೆ, ಇದು ವಿಶ್ವದ ಅತ್ಯುತ್ತಮ ಮತ್ತು ಅತ್ಯಂತ ಮುಂದುವರಿದ ಶಸ್ತ್ರ ಚಿಕಿತ್ಸಾ ರೋಬೋಟಿಕ್ ವೇದಿಕೆಯಾಗಿದ್ದು, ಇದು ಮೂತ್ರಶಾಸ್ತ್ರ, ಆಂಕೊಲಾಜಿ (ಕ್ಯಾನ್ಸರ್ ಶಸ್ತ್ರಚಿಕಿತ್ಸೆ),ಸ್ತ್ರೀರೋಗ ಶಾಸ್ತ್ರ, ಜಠರ ಕರುಳಿನ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಸೌಲಭ್ಯವನ್ನು ಪ್ರಾರಂಭಿಸಿದ ಒಂದು ತಿಂಗಳಲ್ಲಿ ಕೆಎಸ್ ಹೆಗ್ಡೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು 25 ಸಂಕೀರ್ಣ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ, ದಾಖಲೆ ಸಂಖ್ಯೆಯ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ಚಾನ್ಸ್ಸ್‌ಲರ್‌ಗಳಾದ ಡಾ. ಎಂ ಶಾಂತಾರಾಮ ಶೆಟ್ಟಿ, ವಿಶಾಲ್ ಹೆಗ್ಡೆ, ನಿಟ್ಟೆ ವಿವಿ ಉಪಕುಲಪತಿ ಡಾ. ಎಂ ಎಸ್ ಮೂಡಿತ್ತಾಯ, ರಿಜಿಸ್ಟ್ರಾರ್ ಡಾ. ಹರ್ಷ ಹಾಲಹಳ್ಳಿ, ಪ್ರಭಾರ ಡೀನ್ ಡಾ ಜಯಪ್ರಕಾಶ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್ ಶೆಟ್ಟಿ, ರೋಬೋಟಿಕ್ ಟೀಮ್‌ಗೆ ಡಾ. ರಾಜೀವ್ ಟಿಪಿ ಕೋ-ಆರ್ಡಿನೇಟರ್ ಆಗಿದ್ದಾರೆ.
ತಂಡದಲ್ಲಿ ಡಾ. ಕೆ .ಆರ್. ಭಗವಾನ್, ಡಾ. ಶ್ರೀಪಾದ್ ಜಿ ಮೆಹಂದಳೆ, ಡಾ. ಲಕ್ಷ್ಮೀ ಮಂಜೀರ, ಡಾ.ವಿನಯ್ ಕುಮಾರ್ ರಾಜೇಂದ್ರ, ಡಾ.ಸಂತೋಷ್ ಕುಮಾರ್, ಡಾ.ಪ್ರವೀಣ್ ಭಟ್, ಡಾ. ಸೂರಜ್ ಹೆಗ್ಡೆ ಡಾ. ನರೇಂದ್ರ ಪೈ ಇದ್ದಾರೆ.