ಕಬಕ | ಅಕ್ರಮ ದನ ಸಾಗಾಟದ ಕಾರು ಪಲ್ಟಿ: ನಾಲ್ಕು ದನಗಳು ಪೊಲೀಸ್ ವಶಕ್ಕೆ

ಪುತ್ತೂರು, ಮಾ.25: ಕಾರೊಂದರಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿಬಿದ್ದ ಘಟನೆ ರವಿವಾರ ರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಅಡ್ಯಲಾಯ ರಸ್ತೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದವರು ಅಪಘಾತಕ್ಕೀಡಾದ ಕಾರು ಹಾಗೂ ದನಗಳನ್ನು ತೊರೆದು ಪರಾರಿಯಾಗಿದ್ದಾರೆ. ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿವೆ.
ಕಾರಿನಲ್ಲಿ ದನ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಕಬಕದ ಬಜರಂಗದಳ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದು, ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸರು ದನಗಳನ್ನು ಮತ್ತು ಜಖಂಗೊಂಡ ಕಾರನ್ನು ಪುತ್ತೂರು ನಗರ ಠಾಣೆಗೆ ತಂದಿದ್ದಾರೆ.
Next Story