ಕೈಕಂಬ: ನಮ್ಮ ನಾಡ ಒಕ್ಕೂಟ ವತಿಯಿಂದ ʼಕುಟುಂಬದ ಯೋಗಕ್ಷೇಮ - ಆನಂದಮಯ ಕಾರ್ಯಕ್ರಮʼ
ಕೈಕಂಬ: ನಮ್ಮ ನಾಡ ಒಕ್ಕೂಟ (ಎನ್ ಎನ್ ಒ) ಕೌನ್ಸಿಲಿಂಗ್ ಇವೆಂಟ್ ಇವರ ಆಶ್ರಯದಲ್ಲಿ "ಕುಟುಂಬದ ಯೋಗಕ್ಷೇಮ ಮತ್ತು ಆನಂದಮಯ ಕಾರ್ಯಕ್ರಮ"ವು ಕೈಕಂಬದ ಮೆಘಾ ಪ್ಲಾಝಾದ ಸಭಾಂಗಣದಲ್ಲಿ ನಡೆಯಿತು.
ಎನ್ ಎನ್ ಒ ಇದರ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ಉದ್ಘಾಟನೆ ನೆರೆವೇರಿಸಿ, ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸಮುದಾಯದ ಸಬಲೀಕರಣದ ಮೇಲೆ ಕೇಂದ್ರೀಕರಿಸಿದ ನಮ್ಮ ನಾಡ ಒಕ್ಕೂಟ, ಕುಟುಂಬ ಯೋಗಕ್ಷೇಮ ಮತ್ತು ಆನಂದದಾಯಕ ವಿವಾಹ ಕಾರ್ಯಕ್ರಮವನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ಲತೀಫ್ ಮದನಿ, ಝವೇರಿಯ ಹಯಾತ್, ಮೊಹಮ್ಮದ್ ಕುಂಞಿ, ಅಬ್ದುಲ್ಲಾ ಮಾದುಮೂಲೆ, ವೈ ಎಸ್ ಹೈದರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಎನ್ ಎನ್ ಒ ಖಜಾಂಚಿ ಪೀರು ಸಾಹೇಬ್, ಟ್ರಸ್ಟಿಗಳಾದ ಅಬ್ದುಲ್ ಹಮೀದ್, ಹುಸೇನ್ ಹೈಕಾಡಿ, ಸಲೀಮ್ ಬಾಜಿ ಇಸಾಕ್ ಶೇಕ್, ಮೂಡುಬಿದಿರೆ ಎನ್ ಎನ್ ಒ ಘಟಕದ ಅಧ್ಯಕ್ಷರಾದ ನೂರುದ್ದೀನ್, ಬಂಟ್ವಾಳ ಘಟಕದ ಅಧ್ಯಕ್ಷರಾದ ರಹೀಮ್ ಬಂಟ್ವಾಳ, ಕುಂದಾಪುರದ ಅಬ್ದುಲ್ ಖಾದರ್ ಮೂಡ್ಗೋಡಿ, ಕೈಕಂಬದ ಝಕರಿಯಾ ಬಾಜಿ, ಅಬ್ದುಲ್ ರಹಿಮಾನ್ ಬಾಜಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.