ನಾಟೆಕಲ್: ಕಣಚೂರು ವೈದ್ಯಕೀಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ "ಆಜನ್"-2023ಗೆ ಚಾಲನೆ
ಕೊಣಾಜೆ: ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಫೌಂಡೇಶನ್ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ "ಅಜೋನ್" -2023 ಉದ್ಘಾಟನಾ ಸಮಾರಂಭ ಕಣಚೂರು ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ ಕಬಡ್ಡಿ ಆಟಗಾರ ಶ್ರೀಕಾಂತ್ ಜಾಧವ್ ಅವರು ಭಾಗವಹಿಸಿ ಮಾತನಾಡಿದರು.
ಭಾರತೀಯ ಕಬಡ್ಡಿ ತಂಡದ ಫಿಸಿಯೋಥೆರಪಿಸ್ಟ್ ಮಹೇಶ್ ಶಿಂಧೆ ಅವರು ಮಾತನಾಡಿ, ತಂದೆ ತಾಯಿಯ ಬಳಿ ಹೇಳಲಾಗದ ಸಮಸ್ಯೆ ತೊಂದರೆ ನಾವು ಮುಕ್ತವಾಗಿ ಹೇಳುವುದಾದರೆ ಅದು ವೈದ್ಯರ ಬಳಿ ಮಾತ್ರ. ನಮ್ಮ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ನಿಜವಾಗಿಯೂ ವೈದ್ಯರು ಒಂದರ್ಥದಲ್ಲಿ ಕಾಣುವ ದೇವರು ಎಂದು ಹೇಳಿದರು.
ಸಂಸ್ಥೆಯ ಚೇರ್ ಮೆನ್ ಡಾ. ಯು.ಕೆ. ಮೋನು ಉದ್ಘಾಟನಾ ಭಾಷಣ ಮಾಡಿದರು. ನಿರ್ದೇಶಕ ಅಬ್ದುಲ್ ರಹಿಮಾನ್, ಸಲಹಾ ಸಮಿತಿ ಚೇರ್ ಮೆನ್ ಇಸ್ಮಾಯಿಲ್ , , ಶಹನವಾಝ್ ಮಾಣಿಪ್ಪಾಡಿ, ಡೀನ್ ಡಾ. ರತ್ನಾಕರ್, ಹರೀಶ್ ಶೆಟ್ಟಿ, ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಹಾಗೂಫಿಸಿಯೋಥೆರಪಿ ಪ್ರಿನ್ಸಿಪಾಲ್ ಡಾ. ಸೊಹೈಲ್ ಉಪಸ್ಥಿತರಿದ್ದರು.