ಕಣಚೂರು: ಸಾಂಕ್ರಾಮಿಕ ಸೋಂಕುಗಳ ಕುರಿತು ಕಾರ್ಯಾಗಾರ
ಉಳ್ಳಾಲ: ಸಾಂಕ್ರಾಮಿಕ ರೋಗಗಳ ಬಗ್ಗೆ ಬಹಳಷ್ಟು ಪ್ರಕರಣಗಳು ನಡೆದಿರುವುದರಿಂದ ಅದನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ವೈದ್ಯರಿಗೆ ಈ ಸೋಂಕು ಸವಾಲಾಗಿ ಪರಿಣಮಿಸಿದ್ದು ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಕಿಶೋರ್ ಕುಮಾರ್ ಹೇಳಿದರು.
ದೇರಳಕಟ್ಟೆಯ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಶ್ರಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಿಲ್ಲಾ ಆರೋಗ್ಯ ಕಚೇರಿ ಹಾಗೂ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದೊಂದಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆಯಿಂದ ತಡೆಗಟ್ಟುವಿಕೆ ಮತ್ತು ಸಾಂಕ್ರಾಮಿಕ ಸೋಂಕುಗಳು ಎಂಬ ವಿಚಾರದ ಕುರಿತು ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಆರೋಗ್ಯ ಅಧಿಕಾರಿ ರಾಜೇಶ್ ಬಿ.ವಿ.ಮಾತನಾಡಿ ಕೋವಿಡ್, ಪೋಲಿಯೊ, ರುಬೆಲ್ಲಾ ರೋಗಗಳ ತಡೆಗಟ್ಟಲು ಆರೋಗ್ಯ ಇಲಾಖೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಆಳವಾದ ಅಧ್ಯಯನ ಅಗತ್ಯ ಕೂಡಾ ಇದೆ. ಈ ವಿಚಾರದಲ್ಲಿ ವೈದ್ಯರು ಕೂಡಾ ಕಾರ್ಯಗತರಾಗಬೇಕು ಎಂದು ಸಲಹೆ ನೀಡಿದರು
ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಚೇರ್ ಮೆನ್ ಡಾ. ಹಾಜಿ ಯು.ಕೆ. ಮೋನು ಕಣಚೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಅನಂತೇಶ್ ಬಾರ್ಕೂರು, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಕಮಿಟಿ ಮುಖ್ಯಸ್ಥ ಡಾ. ಮುಹಮ್ಮದ್ ಇಸ್ಮಾಯಿಲ್, ಸದಸ್ಯ ಎಂ.ವಿ. ಪ್ರಭು, ಡೀನ್ ಡಾ. ರತ್ನಾಕರ , ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಹರೀಶ್ ಶೆಟ್ಟಿ, ಚೈಲ್ಡ್ ಹೆಲ್ತ್ ಆಫೀಸರ್ ಡಾ. ರಾಜೇಶ್ , ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೊನಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಫ್ರೊ.ಡಾ. ಆಸೀಫ್ ಖಾನ್ ಸ್ವಾಗತಿಸಿದರು. ಪ್ರೀವೇಲ್ ಶ್ರೇಯಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.