ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ "ಕನ್ನಡ ಡಿಂಡಿಮ 2023"
ವಿಟ್ಲ : ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡ ಡಿಂಡಿಮ -2023" ಕಾರ್ಯಕ್ರಮ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಇಸ್ಮತ್ ಪಜೀರ್ ಮಾತನಾಡಿ, ನಾವು ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಯಾವುದೇ ಭಾಷೆಯನ್ನು ಕಲಿಯಲಿ, ಕೊನೆಗೆ ನಮ್ಮ ಮನಸ್ಸು ಬಾಷೆ ಎಲ್ಲವೂ ನಮ್ಮ ರಾಜ್ಯ, ನಮ್ಮ ಬಾಷೆಗಾಗಿ ಹಾತೊರಿಯುತ್ತಿರುವಂತಾಗಿರಬೇಕು, ಕನ್ನಡ ಬಾಷೆ, ಸಂಸ್ಕೃತಿಯನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದರು.
ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಮಾತನಾಡಿದರು. ಶಾಲಾ ಆಡಳಿತ ಸಮಿತಿಯ ನಿರ್ದೇಶಕ ನೌಶೀನ್ ಬದ್ರಿಯಾ, ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್ ವೇದಿಕೆಯಲ್ಲಿ ಉಪಸ್ಥಿತರರಿದ್ದರು.
ಇದೇ ವೇಳೆ ಇಸ್ಮತ್ ಪಜೀರ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಭಾಷಣ, ಹಾಡು , ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು. ಹಲವು ಕನ್ನಡ ಕವಿಗಳ, ಹೋರಾಟಗಾರರ ವೇಷ ಧರಿಸಿದ ಮಕ್ಕಳ ಛದ್ಮವೇಶವು ಪ್ರಮುಖ ಆಕರ್ಷಣೆಯಾಗಿತ್ತು. ಮೂರನೇ ತರಗತಿಯ ದಿಶಾನ್ ಮತ್ತು ಆರನೇ ತರಗತಿಯ ಚುಕ್ಕಿ ಎಂಬ ಇಬ್ಬರು ವಿದ್ಯಾರ್ಥಿಗಳು ನಡೆಸಿಕೊಟ್ಟ ಲಾವಣಿ ಮತ್ತು ಏಕ ಪಾತ್ರಾಭಿನಯವು ಎಲ್ಲರ ಗಮನ ಸೆಳೆಯಿತು.
ವಿದ್ಯಾರ್ಥಿಗಳಾದ ಝುಲ್ಫ ಸ್ವಾಗತಿಸಿ, ತ್ವಾಹ ವಂದಿಸಿದರು. ಆಫ್ಫಾನ್ ಮತ್ತು ರಿಲ್ಹ ಕಾರ್ಯಕ್ರಮ ನಿರೂಪಿಸಿದರು.