ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಉಳ್ಳಾಲ: ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲ್ಪಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಳ್ಳಾಲದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಸ್ಥಾನ ಪಡೆದಿದೆ.
ಇಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಗಣ್ಯರ ಸಮ್ಮುಖ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಟ್ರಸ್ಟ್ ನ ಪರವಾಗಿ ಸ್ವೀಕರಿಸಿದರು.
ಇತಿಹಾಸ ಪ್ರಸಿದ್ಧ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಸುಮಾರು 40 ವರ್ಷಗಳಿಂದ ಕಾರ್ಯಚರಿಸಿ ಉಳ್ಳಾಲದಾದ್ಯಂತ 17 ಶಾಲಾ ಕಾಲೇಜುಗಳು ನಡೆಸುತ್ತಿದೆ.
ಅತೀ ಕಡಿಮೆ ಫೀಸಿನಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಶಾಲಾ ಕಾಲೇಜುಗಳು ಮತ್ತು ವೃತ್ತಿಪರ ಕೋರ್ಸುಗಳು ಕಾರ್ಯಚರಿಸುತ್ತಿದೆ, ಅದರಲ್ಲೂ ಕಡುಬಡ ಕುಟುಂಬಕ್ಕೆ, ಪ್ರಥಮ ಶ್ರೇಣಿ ಪಡೆಯುವ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯತಿ ಫೀಸಿನಲ್ಲಿ ಶಾಲಾ ಕಾಲೇಜುಗಳು ಕಾರ್ಯಾಚರಿಸುತ್ತಿದೆ.
ಉಳ್ಳಾಲ ದರ್ಗಾ ಅಧ್ಯಕ್ಷರಾಗಿದ್ದ ಇಬ್ರಾಹೀಮ್ ಹಾಜಿ ಮತ್ತು ಖಾಝಿಯಾಗಿದ್ದ ತಾಜುಲ್ ಉಲಮಾ(ಖ.ಸಿ) ಉಳ್ಳಾಲ ತಂಙಳ್ ಹಾಗೂ ಅಂದಿನ ಶಾಸಕರಾಗಿದ್ದ ಯು.ಟಿ ಫರೀದ್ ರವರ ಸಹಕಾರದಿಂದ ಪ್ರಾರಂಭಗೊಂಡ ಟ್ರಸ್ಟ್, ಸುದೀರ್ಘ 40 ವರ್ಷಗಳಿಂದ 17 ಅಧೀನ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಶಾಲಾ ಕಾಲೇಜುಗಳ ಶಿಕ್ಷಕ-ಶಿಕ್ಷಕಿ ವೃಂದದ ಅವಿರತ ಶೃಮದಿಂದ ಉತ್ತಮ ಫಲಿತಾಂಶದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ.
ಸಯ್ಯಿದ್ ಮದನಿ ದರ್ಗಾ ಸಮಿತಿ ಮತ್ತು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಸಮಾಜಮುಖಿ ಕಾರ್ಯವೈಕರಿ ಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದ ಘನವೆತ್ತ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಉಳ್ಳಾಲ ಶಾಸಕರೂ, ವಿಧಾನಸಭಾಧ್ಯಕ್ಷರೂ ಆದ ಯು.ಟಿ ಖಾದರ್ ರವರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಹಾಗೂ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.