ಕಾವೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ) ವತಿಯಿಂದ ಬೃಹತ್ ರಕ್ತದಾನ ಶಿಬಿರ

ಆಗಸ್ಟ್ 15:-ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಶನ್ (ರಿ) ಶಾಂತಿನಗರ ಕಾವೂರು ಇದರ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಹಾಗೂ ಎ ಜೆ ಆಸ್ಪತ್ರೆ ಮಂಗಳೂರು ಇದರ ಜಂಟಿ ಸಹಾಭಾಗೀತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಶಾಂತಿನಗರ ಕೇಂದ್ರ ಮೈದಾನದಲ್ಲಿ ನಡೆಯಿತು.
ಶಾಂತಿನಗರ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಂ ಬಾತೀಶ, ಕೂಳೂರು ಜುಮಾ ಮಸೀದಿಯ ಅಧ್ಯಕ್ಷ ರಾದ ಅಬ್ಬಾಸ್ ಹಾಜಿ, ಅಲ್ ಫಾರೂಕ್ ಜುಮಾ ಮಸೀದಿಯ ಗೌರವಧ್ಯಕ್ಷರಾದ ಅಯ್ಯುಬ್ ಹಾಜಿ,ಬದ್ರಿಯಾ ಯಂಗ್ ಮೆನ್ಸ್ ಅಶೋಸಿಯೇಶನ್ ಇದರ ಗೌರವಧ್ಯಕ್ಷರಾದ ರಶೀದ್ ಬಿ ಆರ್ ಆರ್, ಅಲ್ ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷರಾದ ನೌಷಾದ್ ಕಾವೂರು, ಬದ್ರಿಯಾ ಯಂಗ್ ಮೆನ್ಸ್ ಅಶೋಸಿಯೇಶನ್ ಇದರ ಅಧ್ಯಕ್ಷರಾದ ಇಜಾಝ್, ಎ ಜೆ ಬ್ಲಡ್ ಬ್ಯಾಂಕ್ ಉಸ್ತುವಾರಿ ಪಿ ಆರ್ ಗೋಪಾಲಕೃಷ್ಣ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶೀಪಟ್ನ ಮತ್ತು ಕಾರ್ಯ ನಿರ್ವಾಹಕರಾದ ತೌಫೀಕ್ ಕುಳಾಯಿ, ಸವಾದ್ ಕುಂಜತ್ತಬೈಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈ ರಕ್ತದಾನ ಶಿಬಿರದಲ್ಲಿ ಒಟ್ಟು 120 ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರೊಂದಿಗೆ ಜೀವದಾನಿಗಳಾದರು.
ಸಲಾಂ ಬೋಳಾರ್ ಕಾರ್ಯಕ್ರಮ ನಿರೂಪಿಸಿದರು...