ಕೆಮ್ಮಾರ: ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ
ಉಪ್ಪಿನಂಗಡಿ: ಕೆಮ್ಮಾರ ಶಕ್ತಿನಗರದ ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಟೈಲರಿಂಗ್ ತರಬೇತಿ ಶಿಬಿರವನ್ನು ಕೆಮ್ಮಾರ ಶಂಸುಲ್ ಉಲಮಾ ವುಮೆನ್ಸ್ ಕಾಲೇಜ್ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ವಿದ್ಯೆ ಯಾವುದೇ ಇರಲಿ ಕಲಿತ ವಿದ್ಯೆಯನ್ನು ಬದುಕಿನಲ್ಲಿ ಉಪಯೋಗಕ್ಕೆ ತಂದರೆ ಮಾತ್ರ ಕಲಿಕೆಗೆ ಮಹತ್ವ ಬರುವುದು. ಕಲಿತಂತೆ ಸರಳತೆಯಿಂದ ಬದುಕಿದರೆ ನೆಮ್ಮದಿಯ ಬದುಕು ಸಿಗಲಿದೆ. ಕೆಲವು ಮಹಿಳೆಯರು ಆಡಂಬರದ ಬದುಕಿಗೆ ಜೋತು ಬಿದ್ದು ಕಡೆಗೆ ಕುಟುಂಬ ಕಲಹಕ್ಕೂ ಕಾರಣವಾಗುತ್ತಿರುವುದು ಕಾಣುತ್ತಿದ್ದೇವೆ. ಆದ್ದರಿಂದ ಶಿಸ್ತು ಹಾಗೂ ಸರಳತೆಯಿಂದ ಬದುಕುವ ಕಲೆಯನ್ನು ಪ್ರತಿಯೊಬ್ಬರೂ ಕಲಿತು ಕೊಳ್ಳ ಬೇಕು ಎಂದರು.
ಹನೀಫ್ ದಾರಿಮಿ ಪಡೀಲ್, ಶೌಕತ್ತ್ ಫೈಝಿ ಗಂಡಿಬಾಗಿಲು ಮಾತನಾಡಿದರು. ಶಿಕ್ಷಕಿಯರಾದ ಶಾಹಿರಾ ಮಾಹಿರ ಮತ್ತು ಸುಹೈಲಾ ಫಾಳಿಲಾ ಅವರು ವಿದ್ಯಾರ್ಥಿನಿಯರಿಗೆ ಟೈಲರಿಂಗ್ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
Next Story