ಕೊಣಾಜೆ: ಅಂಗನವಾಡಿಗೆ ನುಗ್ಗಿ ಸಹಾಯಕಿಯ ಕರಿಮಣಿ ಸರ ಕಿತ್ತು ಪರಾರಿಯಾದ ದುಷ್ಕರ್ಮಿಗಳು
ಕೊಣಾಜೆ: ಅಂಗನವಾಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಅಂಗನವಾಡಿ ಸಹಾಯಕಿಯ ಕೊರಳಿನಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಪರಾರಿಯಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ತೌಡುಗೋಳಿಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನದ ವೇಳೆ ಶಿಕ್ಷಕಿ ರಜೆಯ ಕಾರಣ ಅಂಗನವಾಡಿಯಲ್ಲಿ ಸಹಾಯಕಿ ಜುನಿಟ್ ಡಿಸೋಜ (54) ಹಾಗೂ ಮಕ್ಕಳು ವಿಶೇಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಓರ್ವ ಅಂಗನವಾಡಿಯ ಮೂವರು ಮಕ್ಕಳನ್ನು ಹಿಡಿದಿಟ್ಟು ಸಹಾಯಕಿಯನ್ನು ಹೆದರಿಸಲು ಮುಂದಾಗಿದ್ದು, ಈ ವೇಳೆ ಅಂಗನವಾಡಿಯ ಸಹಾಯಕಿ ಮಕ್ಕಳ ರಕ್ಷಣೆಗೆ ಮುಂದಾದಾಗ ಸಹಾಯಕಿಯ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.
ಓರ್ವ ಬೈಕ್ ಚಾಲನಾ ಸ್ಥಿತಿಯಲ್ಲಿ ಇಟ್ಟಿದ್ದ ಎನ್ನಲಾಗಿದ್ದು, ಪರಾರಿಯಾದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story