ಕುದ್ರೋಳಿ: ಮಾದಕ ವ್ಯಸನದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ
ಮಂಗಳೂರು, ಜು.18: ಕುದ್ರೋಳಿ ಪರಿಸರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುದ್ರೋಳಿ ಪರಿಸರದ ಐದು ಮಸೀದಿಗಳ ಆಡಳಿತ ಸಮಿತಿ ಮತ್ತು ಕುದ್ರೋಳಿಯ ಎಲ್ಲಾ ಸಂಘ ಸಂಸ್ಥೆಗಳನ್ನು ಒಳಗೊಂಡ ಮುಸ್ಲಿಂ ಐಕ್ಯತಾ ವೇದಿಕೆಯಿಂದ ದ.ಕ.ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಕುದ್ರೋಳಿ ಜಾಮೀಯ ಮಸೀದಿಯ ಅಧ್ಯಕ್ಷ ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಸೇರಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಅದರಂತೆ ಮಂಗಳವಾರ ಐಕ್ಯತಾ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಹಾಜಿ ಯಾಸೀನ್ ಕುದ್ರೋಳಿ, ಡಾ. ಮುಹಮ್ಮದ್ ಆರೀಫ್ ಮಸೂದ್, ಹಾಜಿ ಬಿ. ಅಬೂಬಕ್ಕರ್, ಅಬ್ದುಲ್ ಅಝೀಝ್ ಕುದ್ರೋಳಿ, ಶಂಸುದ್ಧೀನ್ ಎಚ್‌ಬಿಟಿ, ವಹಾಬ್ ಕುದ್ರೋಳಿ, ಎನ್.ಕೆ. ಅಬೂಬಕ್ಕರ್, ಮಕ್ಬೂಲ್ ಅಹ್ಮದ್, ಅಶ್ರಫ್ ಕಿನಾರ, ಮುಝೈರ್, ಹಾರೀಸ್,ಲತೀಫ್, ಉಮರ್ ಫಾರೂಕ್ ನಿಯೋಗದಲ್ಲಿದ್ದರು.