ಕುದ್ರೋಳಿ: ಸಚಿವ ಝಮೀರ್ ಅಹ್ಮದ್ ರನ್ನು ಭೇಟಿಯಾದ ಮುಸ್ಲಿಂ ಐಕ್ಯತಾ ವೇದಿಕೆ
ಮಂಗಳೂರು: ದ.ಕ ಜಿಲ್ಲಾ ಪ್ರವಾಸದಲ್ಲಿದ್ದ ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ ಜೆಡ್ ಝಮೀರ್ ಅಹ್ಮದ್ ಖಾನ್ ಅವರನ್ನು ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಇದರ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು.
2019 ರಲ್ಲಿ ನಡೆದ ಎನ್ ಆರ್ ಸಿ ಸಂಭದಪಟ್ಟ ಮಂಗಳೂರು ಗೊಲೀಬಾರು ಕೃತ್ಯವನ್ನು ಸಮರ್ಥಿಸುವ ಉದ್ದೇಶದಿಂದ ಅಮಾಯಕ ಯುವಕರ ಮೇಲೆ ಬೇಕಾಬಿಟ್ಟಿ ಪ್ರಕರಣ ದಾಖಲಿಸಲಾಗಿದೆ. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರು ಅಲ್ಪ ಸಂಖ್ಯಾತ ಸಮುದಾಯದ ಹಿತರಕ್ಷಣೆ ದೃಷ್ಟಿಯಿಂದ ದಾಖಲಿಸಿದ ಸರ್ವ ಪ್ರಕರಣಗಳನ್ನು ಸರಕಾರದ ವತಿಯಿಂದ ಹಿಂದಕ್ಕೆ ಪಡೆದು ಪ್ರಕರಣಕ್ಕೆ ಮುಕ್ತಾಯ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
Next Story