ಕೂಳೂರು: ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ರಸ್ತೆ ತಡೆ
ಮಂಗಳೂರು, ಜು.18: ರಾಷ್ಟ್ರೀಯ ಹೆದ್ದಾರಿ 66 ಕೂಳೂರಿನಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ (ರಿ) ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಸ್ಥಳೀಯರು ರಸ್ತೆ ತಡೆ ನಿರ್ಮಿಸಿ ಕುಳೂರಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು.
ಕೂಳೂರಿನಲ್ಲಿ ನೀರಿನ ಕೊಳವೆ ಕಾಮಗಾರಿ ಕಾರಣದಿಂದಾಗಿ ಬೇಸಿಗೆ ಕಾಲದಲ್ಲಿ ಧೂಳು ಮಳೆಗಾಲದಲ್ಲಿ ಕೆಸರು ಗುಂಡಿಗಳಲ್ಲಿ ತುಂಬಿಕೊಂಡು ಘನ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ದಿನನಿತ್ಯ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ. ಇದರ ಬಗ್ಗೆ .ಕೂಳೂರಿನಲ್ಲಿರುವ ಫಾಲ್ಗುಣಿ ನದಿಗೆ 6 ಲೈನ್ ಸೇತುವೆ ಕಾಮಗಾರಿಯು ಶುರುವಾಗಿದ್ದು ಅರ್ಧಕ್ಕೆ ನಿಲ್ಲಿಸಿ. 2 ವರ್ಷವಾಯಿತು. ಇದರ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗಿಲ್ಲ ದಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ದೂರಿದ್ದಾರೆ.
ಕಳೆದ 18 ವರ್ಷದ ಹಿಂದೆ ನಿರ್ಮಾಣಗೊಂಡ ಮೇಲು ಸೇತುವೆಗೆ ಸಂಬಂಧಪಟ್ಟ ಸರ್ವಿಸ್ ರಸ್ತೆಯು ಅತ್ಯಂತ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಂಬಂಧ ಪಟ್ಟ ಹೈವೆ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್‌ಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ರಾಷ್ಟ್ರೀಯ ಹೆದ್ದಾರಿ ತಡೆ ನಿರ್ಮಿಸಿ ಪ್ರತಿಭಟನೆ ಮಾಡಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ತಿಳಿಸಿದೆ.
ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಿ.ಜಿ.ಗುರುಚಂದ್ರ ಹೆಗ್ಡೆ, ಗೌರವಾಧ್ಯಕ್ಷ ಡಾ.ಎಂ.ಎಸ್.ಎನ್ ಪುತ್ರನ್, ಕೋಶಾಧಿಕಾರಿ ಎವಿಲಿನ್ ಕ್ರೇಪರ್ ಡಿ ಸೋಜ , ಕಾರ್ಯದರ್ಶಿ ಗಣೇಶ್ ಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.