ಕುಂಬ್ರ ಮರ್ಕಝ್ ಶಾರ್ಜಾ ಸಮಿತಿಯ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಅಬ್ದುಲ್ ಕರೀಂ ಮುಸ್ಲಿಯಾರ್, ಇಸ್ಹಾಖ್ ಕೂರ್ನಡ್ಕ, ಅಬ್ದುಲ್ಲ ಹಾಜಿ ಪೆರುವಾಯಿ
ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಶಾರ್ಜಾ ಸಮಿತಿಯ ಮಹಾಸಭೆಯು ಅಲ್ ವಹ್ದಾ ಮಹ್ಲರಾ ಹಾಲ್ ನಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ ಎಮ್ಮೆಸ್ಸೆಂ ಝೖನೀ ಕಾಮಿಲ್ ಹಾಗೂ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಅನೆಕಲ್ಲು, ಅಬ್ದುಲ್ ರಝಾಕ್ ಹಾಜಿ ಮಣಿಲ, ಝೈನುದ್ದೀನ್ ಹಾಜಿ ಬೆಳ್ಳಾರೆ, ಮೂಸ ಹಾಜಿ ಬಸರಾ, ಇಂಜಿನಿಯರ್ ಅಬ್ದುಲ್ ರಝಾಕ್ ನಾವೂರು ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ಲಾ ನಲ್ಕ, ಅಧ್ಯಕ್ಷರಾಗಿ ಅಬ್ದುಲ್ ಕರೀಂ ಮುಸ್ಲಿಯಾರ್ ಉರುವಾಲ್ ಪದವು, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಹಾಖ್ ಕೂರ್ನಡ್ಕ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ಲ ಹಾಜಿ ಪೆರುವಾಯಿ ಅವರನ್ನು ಆಯ್ಕೆ ಮಾಡಲಾಯಿತು.
ಇತರ ಪದಾಧಿಕಾರಿಗಳು: ಅಶ್ರಫ್ ಸತ್ತಿಕಲ್ಲು, ಶರೀಫ್ ಸಾಲೆತ್ತೂರು (ಉಪಾಧ್ಯಕ್ಷರು) ತಾಜುದ್ದೀನ್ ಅಮ್ಮುಂಜೆ, ಮುಸ್ತಫಾ ಕುಂಬ್ರ (ಕಾರ್ಯದರ್ಶಿಗಳು), ಕಾರ್ಯಕಾರಿ ಸದಸ್ಯರಾಗಿ ರಫೀಕ್ ತೆಕ್ಕಾರ್, ಅಬೂಸ್ವಾಲಿಹ್ ಸಖಾಫಿ ಇನೋಳಿ, ಸುಹೈಲ್ ಮದನಿ ಈಶ್ವರಮಂಗಿಲ, ಅಬ್ದುಲ್ ರಝಾಕ್ ಹುಮೈದಿ ಬೆಳ್ಳಾರೆ, ಅಬ್ದುಲ್ ರಹ್ಮಾನ್ ಉಳ್ಳಾಲ, ಹುಸೈನ್ ಇನೋಳಿ, ಸಫ್ವಾನ್ ಮಣಿಲ, ಮುಸ್ತಫಾ ಪಂಜ, ಶಾದುಲಿ ಬೆಳಂದೂರು, ಜಬ್ಬಾರ್ ಇನೋಳಿ, ಅನ್ಸಾರ್ ಸಾಲೆತ್ತೂರ್.
ಕಾರ್ಯಕ್ರಮದಲ್ಲಿ ಮರ್ಕಝ್ ಕುಂಬ್ರ ಯುಎಇ ರಾಷ್ಟೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಶಕೂರ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಅಬ್ದುಲ್ಲ ನಲ್ಕ ಉದ್ಘಾಟನೆ ಮಾಡಿದರು. ಕೆಸಿಎಫ್ ಶಾರ್ಜಾ ಝೋನ್ ಅಧ್ಯಕ್ಷ ರಫೀಕ್ ತೆಕ್ಕಾರ್ ಸ್ವಾಗತಿಸಿ, ಇಸ್'ಹಾಖ್ ಕೂರ್ನಡ್ಕ ವಂದಿಸಿದರು.