ಕುಂಬ್ರ ಮರ್ಕಝ್ ಬೆಳ್ಳಿಹಬ್ಬ: ‘ಸಿಲ್ವರಿಯಂ’ ಘೋಷಣೆ
ಮಂಗಳೂರು : ಪುತ್ತೂರು ಸಮೀಪದ ಕುಂಬ್ರ ಮರ್ಕಝುಲ್ ಹುದಾ ಇದರ 25ನೆ ವರ್ಷಾಚರಣೆಯು ಸನಿಹದಲ್ಲಿದ್ದು, ಈ ನಿಟ್ಟಿನಲ್ಲಿ ‘ಸಿಲ್ವರಿಯಂ’ ಎಂಬ ಹೆಸರಿನಲ್ಲಿ ಎರಡು ವರ್ಷ ಬೆಳ್ಳಿಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ.
2001ರ ಜನವರಿ 26ರಂದು ಶಿಲಾನ್ಯಾಸ ಮಾಡಲ್ಪಟ್ಟ ಮರ್ಕಝ್ಗೆ 2026ರ ಜನವರಿ 26ರಂದು ಇಪ್ಪತ್ತೈದು ವರ್ಷಗಳು ತುಂಬಲಿವೆ. ಇದರ ಅಂಗವಾಗಿ 2024ರ ಜನವರಿ 26ರಿಂದ 2026ರ ಜನವರಿ 26ರ ತನಕ ಸಿಲ್ವರ್ ಜುಬಿಲೀ ಅಭಿಯಾನ ಹಮ್ಮಿಕೊಳ್ಳಲಾಗುವುದು.
ಕುಂಬ್ರದಲ್ಲಿ ನ.26ರಂದು ನಡೆಯಲಿರುವ ಸಿಲ್ವರಿಯಂ ಸ್ವಾಗತ ಸಮಿತಿಯ ರಚನಾ ಸಭೆಯಲ್ಲಿ ಎರಡು ವರ್ಷಗಳ ಕಾರ್ಯ ಕ್ರಮಗಳನ್ನು ಪ್ರಕಟಿಸುವ ಬಗ್ಗೆ ಅಧ್ಯಕ್ಷ ಅರಿಯಡ್ಕ ಅಬ್ದರಹ್ಮಾನ್ ಹಾಜಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಉಪಾಧ್ಯಕ್ಷ ಡಾ.ಝೈನಿ ಕಾಮಿಲ್ ಚರ್ಚೆಗೆ ನೇತೃತ್ವ ವಹಿಸಿದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ ವಂದಿಸಿದರು.
Next Story