ಮಂಗಳೂರು: ಕೂಲಿ ಕಾರ್ಮಿಕ ನಾಪತ್ತೆ
ಮಂಗಳೂರು: ನಗರದ ನಾಗುರಿಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ರಮೇಶ್ ಹಡಪದ (40) ಎಂಬವರು ಮಾ.19ರಂದು ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಬಳಿ ಬಿಲ್ಡಿಂಗ್ ಕೂಲಿ ಕೆಲಸಕ್ಕೆ ಹೋದವರು ಸಂಜೆಯಾದರೂ ಮನೆಗೆ ವಾಪಸ್ ಬಾರದೆ ಕಾಣೆಯಾಗಿದ್ದಾರೆ.
5.5 ಅಡಿ ಎತ್ತರದ, ಗೋಧಿ ಮೈಬಣ್ಣದ, ಸಾಧಾರಣ ಶರೀರ ಹೊಂದಿರುವ ಇವರು ಕಾಣೆಯಾದ ದಿನ ಬಿಳಿ ಬಣ್ಣದ ಶರ್ಟ್, ಕಪ್ಪು ಹಾಗೂ ಕೆಂಪು ಮಿಶ್ರಿತ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರನ್ನು ಕಂಡವರು ಮಂಗಳೂರು ಗ್ರಾಮಾಂತರ ಠಾಣೆ ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story