ಕನಿಷ್ಠ ಬಾಡಿಗೆ ದರ ನಿಗದಿಗೊಳಿಸಲು ಲಾರಿ ಮಾಲಕರ ಯೂನಿಯನ್ ಒತ್ತಾಯ
ಮಂಗಳೂರು, ಸೆ.9: ಲಾರಿ ಬೆಲೆ, ಟೋಲ್ ಶುಲ್ಕ, ಇಂಧನ, ಬಿಡಿಭಾಗ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಿರುವ ಕಾರಣ ಲಾರಿಗಳಿಗೆ ಕನಿಷ್ಠ ಬಾಡಿಗೆ ದರ ನಿಗದಿಗೊಳಿಸಬೇಕು ಎಂದು ದ.ಕ. ಜಿಲ್ಲಾ ಟ್ರಕ್ ಓನರ್ಸ್ ಅಸೋಸಿಯೇಶನ್ (ರಿ) ಅಧ್ಯಕ್ಷ ಸುಶಾಂತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಮಂಗಳೂರು ಟ್ರಾನ್ಪೋರ್ಟರ್ಸ್ ಕಂಟ್ರಾಕ್ಟರ್ಸ್ ಏಜೆಂಟ್ ಅಸೋಸಿಯೇಶನ್ ಅಧ್ಯಕ್ಷ ರಾಜೇಶ್ ಹೊಸಕೋಟಿಯವರಿಗೆ ಮನವಿ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಾಟಕ್ಕೆ ಪ್ರತಿ ಟನ್‌ಗೆ ಕನಿಷ್ಠ ದರ ಬಳ್ಳಾರಿಗೆ 1400 ಮತ್ತು ಕೊಪ್ಪಳಕ್ಕೆ 1300 ಕನಿಷ್ಠ ಬೆಲೆ ನಿಗದಿಗೊಳಿಸಬೇಕು. ಈಗಾಗಲೇ ಲಾರಿ ಮಾಲಕರು ಸಂಕಷ್ಟದಲ್ಲಿದ್ದು, ಕನಿಷ್ಠ ಬೆಲೆ ನಿಗದಿಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭ ಕಾರ್ಯದರ್ಶಿ ಸುನಿಲ್ ಡಿಸೋಜ, ಉಪಾಧ್ಯಕ್ಷ ನಿಸಾರ್ ಅಹ್ಮದ್ ನೆಲ್ಯಾಡಿ, ಕೋಶಾಧಿಕಾರಿ ಭಾಸ್ಕರ್ ರೈ, ಜೊತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್, ವೀರೇಂದ್ರ, ಮುಹಮ್ಮದ್ ಶಾಫಿ, ಶರೀಫ್ ನಾರಾವಿ, ಶರೀಫ್ ಮಿಯ್ಯಾರ್ ಉಪಸ್ಥಿತರಿದ್ದರು.
Next Story