ಮದ್ರಸ ಪಬ್ಲಿಕ್ ಪರೀಕ್ಷೆ : 7 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಸಈದಾ ನೆಕ್ಕಿಲ್ ಗೆ 600 ರಲ್ಲಿ 600 ಅಂಕ

ಮಂಗಳೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆಸಿದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ದ.ಕ ಈಸ್ಟ್ ಜಿಲ್ಲೆಯ ಕುಪ್ಪೆಟ್ಟಿ ರೇಂಜ್ ವ್ಯಾಪ್ತಿಯ ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸಈದಾ ಎನ್ 600 ರಲ್ಲಿ 600 ಅಂಕ ಗಳಿಸಿ ಮೊದಲ ರ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾಳೆ.
ಫಾತಿಮತ್ ಸಈದಾ ಎಸ್‌ಜೆ ಎಂ ರಾಜ್ಯ ಕಾರ್ಯದರ್ಶಿ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಮತ್ತು ಫಾತಿಮತ್ ಸಲೀಮಾ ದಂಪತಿಯ ಪುತ್ರಿ.
ಕೆಲವು ತಿಂಗಳುಗಳ ಹಿಂದೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ನಡೆಸಿದ, ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್‌ಶಿಪ್ ಎಕ್ಸಾಂನಲ್ಲೂ ಅತ್ಯಧಿಕ ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಳು.
Next Story