ಮಂಗಳೂರು: ಇಂಟೀರಿಯರ್ ಡಿಸೈನ್ ಕೋರ್ಸ್ ನಲ್ಲಿ ಆಯಿಷಾ ಮರ್ಚಂಟ್ ಗೆ 3ನೇ ರ್ಯಾಂಕ್
ಮಂಗಳೂರು: ಇಂಡಿಯನ್ ಡಿಸೈನ್ ಸ್ಕೂಲ್ ನ ವಿದ್ಯಾರ್ಥಿನಿ ಆಯಿಷಾ ಮರ್ಚಂಟ್ ಅವರು ಮಂಗಳೂರು ವಿಶ್ವವಿದ್ಯಾಲಯದ ಇಂಟೀರಿಯರ್ ಡಿಸೈನ್ ಕೋರ್ಸ್ ನಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ಇಂಡಿಯನ್ ಡಿಸೈನ್ ಸ್ಕೂಲ್ ನಲ್ಲಿ ಆಯಿಷಾ ಶಿಕ್ಷಣ ಪಡೆಯುವ ವೇಳೆ ಹಲವಾರು ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಇಂಟೀರಿಯರ್ ಡಿಸೈನಿಂಗ್ ನಲ್ಲಿ ತಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಂಡಿದ್ದರು.
ಇಂಟೀರಿಯರ್ ಡಿಸೈನಿಂಗ್ ಕುರಿತಂತೆ ತಮ್ಮ ವಿಶಿಷ್ಟ ಚಿಂತನೆ ಮತ್ತು ಪರಿಕಲ್ಪನೆಗಳಿಂದ ಈ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಆಯಿಷಾ ಅನಾವರಣಗೊಳಿಸಿದ್ದಾರೆ.
ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ತಮ್ಮನ್ನು ಬೆಂಬಲಿಸಿದ ತಮ್ಮ ಕುಟುಂಬ ಸ್ನೇಹಿತರು ಮತ್ತು ಶಿಕ್ಷಕ ವರ್ಗಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ.
Next Story