ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಸಾಗಾಟದ ಚಿನ್ನ ವಶ
ಮಂಗಳೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಅಬುದಾಭಿ ಮತ್ತು ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರನ್ನು ತಪಾಸಣೆಗೊಳಪಡಿಸಿದಾಗ 50,93,750 ರೂ. ಮೌಲ್ಯದ 24 ಕ್ಯಾರೆಟ್ ಪರಿಶುದ್ಧತೆಯ 815 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಂಡಾಕಾರದ ಕವರ್ನೊಳಗೆ ಹಾಕಿ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story