ಮಂಗಳೂರು: ಡಿ.8ರವರೆಗೆ ವಿಮಾನ ಹಾರಾಟದ ಸಮಯ ಬದಲಾವಣೆ
ಮಂಗಳೂರು, ನ.30: ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು-ಮಂಗಳೂರು ನಡುವೆ ಡಿಸೆಂಬರ್ 8ರವರೆಗೆ ವಿಮಾನ ಹಾರಾಟದ ಸಮಯವನ್ನು ಬದಲಾಯಿಸಿದೆ. ಗುರುವಾರ ಆರಂಭಗೊಂಡ ಈ ಸಮಯದ ಬದಲಾವಣೆಯಂತೆ ಐಎಕ್ಸ್ 782 ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 9:40ಕ್ಕೆ ಆಗಮಿಸಲಿದ್ದು, ಬೆಳಗ್ಗೆ 10:10ಕ್ಕೆ ಫ್ಲೈಟ್ 678 ಆಗಿ ಬೆಂಗಳೂರಿಗೆ ಹೊರಡಲಿದೆ.
ಕಣ್ಣೂರು-ಬೆಂಗಳೂರು-ಮಂಗಳೂರು-ಬೆಂಗಳೂರು-ತಿರುವನಂತಪುರಂ ವಲಯದಲ್ಲಿ ಕಾರ್ಯನಿರ್ವಹಿಸುವ ಫ್ಲೈಟ್ ಐಎಕ್ಸ್ 1795 ಬೆಂಗಳೂರಿನಿಂದ ರಾತ್ರಿ 7:20ಕ್ಕೆ ಬಂದು ಸಂಜೆ 7:50ಕ್ಕೆ ಫ್ಲೈಟ್ ಐಎಕ್ಸ್ 792 ಆಗಿ ಬೆಂಗಳೂರಿಗೆ ಹೊರಡಲಿದೆ (ಪ್ರಸ್ತುತ ಸಂಜೆ 7:35 ಮತ್ತು ರಾತ್ರಿ 8:15ಕ್ಕೆ ನಿರ್ಗಮನ).
ಬೆಂಗಳೂರಿನಿಂದ ವಾರಣಾಸಿಗೆ ಹೊರಟು ಮಂಗಳೂರಿಗೆ ತೆರಳುವ ಮುನ್ನ ರಾಜ್ಯ ರಾಜಧಾನಿಗೆ ಹಿಂದಿರುಗುವ ಮಾರ್ಗ ದಲ್ಲಿ ವಿಳಂಬವಾದ ಕಾರಣ ವಿಮಾನಯಾನ ಸಂಸ್ಥೆ ಸಮಯವನ್ನು (ಐಎಕ್ಸ್ 782 ಮತ್ತು ಐಎಕ್ಸ್ 678) ಬದಲಾಯಿಸಿದೆ ಎಂದು ಪ್ರಕಟನೆ ತಿಳಿಸಿದೆ.
Next Story