ಮಂಗಳೂರು: ದೀಪಕ್ ಹೆಗ್ಡೆ ನಿಧನ
ಮಂಗಳೂರು: ಕುಂಟಿಕಾನ ನಿವಾಸಿ ದೀಪಕ್ ಹೆಗ್ಡೆ ಬಾಕ್ರಬೈಲ್ (75) ಅವರು ಆ. 6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಉಡುಪಿ ಹಾವಂಜೆ ಗ್ರಾಮದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾಗಿದ್ದು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರಿ ಅಳಿಯ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ದೀಪಕ್ ಹೆಗ್ಡೆ ಅವರ ನಿಧನಕ್ಕೆ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಉದ್ಯಮಿ ಮುಖೇಶ್ ಹೆಗ್ಡೆ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story