ಮಂಗಳೂರು: ಪಾರ್ಟ್ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು
ಮಂಗಳೂರು, ಸೆ.22: ಪಾರ್ಟ್ಟೈಮ್ ಜಾಬ್ ಇದೆ ಎಂದು ಇನ್ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ ಬಳಿಕ 6.32 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಇನ್ಸ್ಟಾಗ್ರಾಂ ಖಾತೆಗೆ ಸೆ.9ರಂದು ಅಪರಿಚಿತ ಕಂಪೆನಿಯ ಹೆಸರಿನಲ್ಲಿ ಜಾಹೀರಾತು ಬಂದಿತ್ತು. ಅದರಲ್ಲಿದ್ದ ಲಿಂಕ್ನ್ನು ಒತ್ತಿದಾಗ ಪ್ರತಿ ದಿನ ಹಣ ತೊಡಗಿಸಿ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಮೊದಲು ತೆರಿಗೆ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಇದನ್ನು ನಂಬಿದ ತಾನು ಹಂತ ಹಂತವಾಗಿ ಸೆ.18ರವರೆಗೆ 6,32,218 ರೂ. ವರ್ಗಾಯಿಸಿದ್ದೇನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story