ಮಂಗಳೂರು| ಸಿ.ಎ. ಪರೀಕ್ಷೆಯ ಮೊದಲ ಯತ್ನದಲ್ಲೇ ಹಲೀಮಾ ಮಿಝ್ನಾ ತೇರ್ಗಡೆ
ಹಲೀಮಾ ಮಿಝ್ನಾ
ಮಂಗಳೂರು: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಹಲೀಮಾ ಮಿಝ್ನಾ ತನ್ನ ಮೊದಲ ಯತ್ನದಲ್ಲೇ ತೇರ್ಗಡೆ ಹೊಂದಿದ್ದಾರೆ.
ನಗರದ ಯೆನೆಪೊಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಹಲೀಮಾ ಮಿಝ್ನಾ ಬಳಿಕ ಸಂತ ಆಗ್ನೆಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರ್ತಿಗೊಳಿಸಿದರು. ಸಂತ ಅಲೋಶಿಯಸ್ ಸಂಜೆ ಕಾಲೇಜಿನಲ್ಲಿ ಸಿಎ ಅಧ್ಯಯನ ಮುಂದುವರಿಸಿದರು. ನಗರದ ಲೆಕ್ಕಪರಿಶೋಧಕ ನರೇಂದ್ರ ಪೈ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದರು. ಈಕೆ ನಗರದ ಎಸ್.ಎಂ. ಸಲೀಂ-ಫಾತಿಮಾ ನಸೀರಾ ದಂಪತಿಯ ಪುತ್ರಿ.
Next Story