ಮಂಗಳೂರು : ಎಲ್ ಜಿ ಇಲೆಕ್ಟ್ರಾನಿಕ್ಸ್ ನಿಂದ ವಾಷ್ ಟವರ್ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು : ಇಲೆಕ್ಟ್ರಾನಿಕ್ ಜಗತ್ತಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಎಲ್ ಜಿ ಇಲೆಕ್ಟ್ರಾನಿಕ್ಸ್ ನಿಂದ ವಾಷ್ ಟವರ್ (ವಾಷರ್/ಡ್ರೈಯರ್) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ನಗರದ SCDCC ಬ್ಯಾಂಕ್ ನ ಬಳಿಯ ಕೆ ಸ್ ರಾವ್ ರಸ್ತೆಯಲ್ಲಿರುವ ಎಲ್ ಜಿ ಬೆಸ್ಟ್ ಶಾಪ್ ನಲ್ಲಿ ಈ ನೂತನ ಶ್ರೇಣಿಯ ವಾಷ್ ಟವರ್ ಗಳನ್ನು ಎಲ್ ಜಿ ಸಂಸ್ಥೆಯ ರಿಜಿನಲ್ ಸೇಲ್ಸ್ ಹೆಡ್ ಮನೋಜ್ ಮೋಹನ್ ದಾಸ್ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಎಲ್ ಜಿ ಬೆಸ್ಟ್ ಶಾಪ್ ಸಂಸ್ಥೆಯ ಆಡಳಿತ ನಿರ್ದೇಶಕರಾದ B ಬಶೀರ್, ಗ್ರೂಪ್ 4 ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಿ ಏ ಇಬ್ರಾಹಿಂ, ಮ್ಯಾನೇಜರ್ ಪ್ರಭಾತ್ ಕಶ್ಯಪ್, ಬ್ರಾಂಚ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಮೋದ್, ಎಲ್ ಜಿ ಯ ಏರಿಯಾ ಮ್ಯಾನೇಜರ್ ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.
ಎಲ್ ಜಿ ವಾಶ್ ಟವರ್ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನವಾಗಿದೆ. WashTower™️ ಒಂದು ಕ್ಲೀನ್, ಆಧುನಿಕ ಜಾಗಕ್ಕಾಗಿ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಇದು ಟಾಪ್ ಸೈಡ್ ಡ್ರೈಯರ್ ಮತ್ತು ಬಾಟಮ್ ಸೈಡ್ ವಾಷರ್ ಅನ್ನು ಒಳಗೊಂಡಿದೆ. ವಾಷರ್ 13 ಕೆಜಿ ಮತ್ತು ಡ್ರೈಯರ್ 10 ಕೆಜಿ. ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಕಡಿಮೆ ಜಾಗವನ್ನು ಆಕ್ರಮಿಸುತ್ತದೆ. ಸ್ವಯಂ ಶುಚಿಗೊಳಿಸುವ ಕಂಡೆನ್ಸರ್ ಸ್ವಯಂ-ಶುಚಿಗೊಳಿಸುತ್ತದೆ, ನಿಮಗೆ ತೊಂದರೆ-ಮುಕ್ತ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ SCDCC ಬ್ಯಾಂಕ್ ನ ಬಳಿಯ ಕೆ ಎಸ್ ರಾವ್ ರಸ್ತೆಯಲ್ಲಿರುವ ಶೋರೂಂ ಗೆ ಭೇಟಿ ನೀಡಿ. ಮೊ.ಸಂ. 8748888383, 8748883383.