ಮಂಗಳೂರು: ಲಾರಿ ಢಿಕ್ಕಿ; ಸ್ಕೂಟರ್ ಸವಾರೆ ಸ್ಥಳದಲ್ಲೇ ಮೃತ್ಯು
ಮಂಗಳೂರು: ನಗರದ ನಂತೂರು ಸಮೀಪದ ಬಜ್ಜೋಡಿ ಬಳಿ ಸ್ಕೂಟರ್ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಮೃತ ಸವಾರೆಯನ್ನು ಕೋಡಿಕಲ್ನ ಕ್ರಿಸ್ಟಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ.
ನಗರದ ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಕ್ರಿಸ್ಟಿ ಕ್ರಾಸ್ತಾ ಅವರು ರವಿವಾರ ಸಂಜೆ ಆಸ್ಪತ್ರೆಯತ್ತ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ನಂತೂರು ಜಂಕ್ಷನ್ ಸಮೀಪದ ಬಜ್ಜೋಡಿ ತಲುಪಿದಾಗ ಸ್ಕೂಟರ್ಗೆ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿಯು ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮ ಕ್ರಿಸ್ಟಿ ಕ್ರಾಸ್ತಾ ಸ್ಥಳದಲ್ಲೇ ಮೃತಪಟ್ಟಿ ರುವುದಾಗಿ ಪ್ರಕರಣ ದಾಖಲಿಸಿರುವ ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story