ಮಂಗಳೂರು| ಆನ್ಲೈನ್ ವಂಚನೆ ಪ್ರಕರಣ: ಆರೋಪಿ ಸೆರೆ
ನಿಧಿನ್ ಕುಮಾರ್
ಮಂಗಳೂರು, ಜ.9: ಆನ್ಲೈನ್ ವಂಚನೆಯೊಂದರ ಆರೋಪಿ ಕೇರಳದ ತ್ರಿಶೂರ್ ಜಿಲ್ಲೆಯ ಮಟ್ಟೂರು ಎಂಬಲ್ಲಿನ ನಿಧಿನ್ ಕುಮಾರ್ ಎಂಬಾತನನ್ನು ನಗರದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ವಾಟ್ಸ್ಆ್ಯಪ್ನಲ್ಲಿ ಬಂದ ಸಂದೇಶ ದಂತೆ ವ್ಯಕ್ತಿಯೊಬ್ಬರು ಹಂತ ಹಂತವಾಗಿ 10,32,000 ರೂ.ವನ್ನು ಹೂಡಿಕೆ ಮಾಡಿದ್ದರು. ವಂಚನೆಯ ಅರಿವಾದ ಬಳಿಕ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸೆನ್ ಪೊಲೀಸರು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ತ್ರಿಶೂರ್ನ ನಿಧಿನ್ ಕುಮಾರ್ ಕೆ.ಎಸ್. ಎಂಬಾತನ ಬ್ಯಾಂಕ್ ಖಾತೆಗೆ 1 ಲಕ್ಷ ರೂ. ಜಮೆಯಾಗಿರುವುದನ್ನು ಪತ್ತೆ ಹಚ್ಚಿದರು. ಅಲ್ಲದೆ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಸೆನ್ ಠಾಣಾಧಿಕಾರಿ ಹಾಗೂ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಎಂಪಿ, ಎಸ್ಸೈ ಗುರಪ್ಪ ಕಾಂತಿ ಮತ್ತು ಸಿಬ್ಬಂದಿ ವರ್ಗವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story