ಮಂಗಳೂರು: ಈದ್ಗಾ ಮಸೀದಿಯಲ್ಲಿ ಈದುಲ್ ಫಿತ್ರ್ ಪೂರ್ವಭಾವಿ ಸಭೆ
ಈದ್ಗಾ ಮಸೀದಿ (File Photo)
ಮಂಗಳೂರು, ಎ.4: ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಈದ್ಗಾ ಮಸೀದಿಯಲ್ಲಿ ಈದುಲ್ ಫಿತ್ರ್ ಪೂರ್ವಭಾವಿ ಸಭೆಯು ಎ.2ರಂದು ದ.ಕ ಜಿಲ್ಲೆ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ನೇತೃತ್ವದಲ್ಲಿ ನಡೆಯಿತು.
ಝೀನತ್ ಬಕ್ಷ್ ಕೇಂದ್ರ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈದುಲ್ ಫಿತ್ರ್ ದಿನದಂದು ಈದ್ಗಾ ಮಸೀದಿಯಲ್ಲಿ ದ.ಕ ಜಿಲ್ಲೆ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನಿರ್ವಹಿಸಲು ಸಕಲ ಸಿದ್ಧತೆ ನಡೆಸುವ ಬಗ್ಗೆ ಚರ್ಚಿಸಲಾಯಿತು.
ಝೀನತ್ ಬಕ್ಷ್ ಕೇಂದ್ರ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್ ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಕೆ.ಅಶ್ರಫ್, ಸದಸ್ಯರಾದ ಅಬ್ದುಲ್ ಸಮದ್, ಅದ್ದು ಹಾಜಿ, ಮುಹಮ್ಮದ್ ಅಶ್ರಫ್ ಹಳೆಮನೆ, ಹಾಜಿ ಐ.ಮೊಯ್ದಿನಬ್ಬ, ಹಾಜಿ ಯೂಸುಫ್ ಕಾರ್ದರ್, ಕಂಡತ್ ಪಳ್ಳಿ ಮಸೀದಿ ಉಪಾಧ್ಯಕ್ಷ ಕೆ.ಶಮೀಮ್ ಅಹ್ಮದ್, ಶಾಮಿರ್ ಅಲಿ ಮಸೀದಿಯ ಸಫೀವುಲ್ಲಾ, ಬಶೀರ್ ಅಹ್ಮದ್ ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಫಕೀರಬ್ಬ, ಕಚ್ಮೀನ್ ಹಮೀದ್, ಇಮ್ರಾನ್ ಎ.ಆರ್, ಮುನವ್ವರ್ ಮತ್ತಿತರರು ಉಪಸ್ಥಿತರಿದ್ದರು.