ಮಂಗಳೂರು: ಟಿಎಂಎ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ರೆಡಿಮೇಡ್ ಉಡುಪುಗಳ ಮಾರಾಟ ಮೇಳ
ಮಂಗಳೂರು, ನ.5: ರೆಡಿಮೇಡ್ ಉಡುಪುಗಳ ಬೃಹತ್ ಮಾರಾಟ ಮೇಳ ನಗರದ ಎಂ.ಜಿ.ರಸ್ತೆಯ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ನ ಗ್ರೌಂಡ್ ಫ್ಲೋರ್ನಲ್ಲಿ ಅ.27ರಂದು ಪ್ರಾರಂಭಗೊಂಡಿದ್ದು, ನ.7ರವರೆಗೆ ನಡೆಯಲಿದೆ.
ಏಳು ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಶೋ ರೂಮ್ಗಳು ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ಸರಕುಗಳನ್ನು ಮಂಗಳೂರಿ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೃಹತ್ ಮಾರಾಟ ಮೇಳದಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ರೆಡಿಮೇಡ್ ಉಡುಪುಗಳ ಅಪಾರ ಸಂಗ್ರಹವಿದ್ದು, ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರೂ. 699ರಿಂದ 2,999ರವರೆಗಿನ ಮಹಿಳೆಯರ ಉಡುಪುಗಳಾದ ವೆಸ್ಟರ್ನ್ ಟಾಪ್, ಟಿ-ಶರ್ಟ್ಸ್, ಲೆಗ್ಗಿಂಗ್ಸ್, ಕುರ್ತಿ, ಬಾಟಮ್ ಜೀನ್ಸ್, ಶಾರ್ಟ್ಸ್ ಇತ್ಯಾದಿಗಳು ಕೇವಲ 250ರಿಂದ 500 ರೂ.ಗಳಲ್ಲಿ ದೊರೆಯಲಿದೆ.
799ರಿಂದ 14,999 ರೂ. ಮೌಲ್ಯದ ಪುರುಷರ ಉಡುಪುಗಳಾದ ರೌಂಡ್ ನೆಕ್ ಟಿ-ಶರ್ಟ್ಸ್, ಪೋಲೋ ಟಿ- ಶರ್ಟ್ಸ್, ಟಿ- ಶರ್ಟ್ಸ್, ಜೀನ್ಸ್, ಶರ್ಟ್ಸ್, ಬ್ಲೇಝರ್, ಟ್ರಾಕ್ ಪ್ಯಾಂಟ್, ಶಾರ್ಟ್, ಜಾಕೆಟ್ಸ್, ಪುಲ್ಲೋವರ್ಗಳು ಕೇವಲ 300ರಿಂದ 2000 ರೂ.ನಲ್ಲಿ ಲಭಿಸುತ್ತದೆ.
1,199 ರಿಂದ 4999 ರೂ. ಮೌಲ್ಯದ ಪುರಷರ ಶೂ ಮತ್ತು ಪಾದರಕ್ಷೆಗಳು ಕೇವಲ 500ರಿಂದ 2,000 ರೂ.ನಲ್ಲಿ ದೊರೆಯಲಿದ್ದು, 1,499ರಿಂದ 2,999 ರೂ. ಮೌಲ್ಯದ ಮಹಿಳೆಯರ ಶೂ ಮತ್ತು ಪಾದರಕ್ಷೆಗಳು ಕೇವಲ 300ರಿಂದ 500 ರೂ.ಗಳಲ್ಲಿ ಲಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಾರಾಟ ಮೇಳದಲ್ಲಿ ಪುಮಾ, ಅಡಿಡಾಸ್, ರೀಬಾಕ್, ಬೆನ್ಟನ್, ಲೆವಿಸ್, ಫ್ರೀ ಸೋಲ್, ಸ್ಪೈಕಾರ್, ಜಾಕ್ ಆ್ಯಂಡ್ ಜೋನ್ಸ್, ರೇಮಂಡ್, ಪಾರ್ಕ್ ಅವೆನ್ಯೂ, ಕಲರ್ ಪ್ಲಸ್, ಅಲೆನ್ ಸಾಲಿ, ಎಲ್ಪಿ, ಮೊದಲಾದ ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳು ದೊರೆಯಲಿದೆ.