ಮಂಗಳೂರು: ಫೆ.2ರಂದು ಟೀನ್ಸ್ ಸ್ಪೇಸ್ ವಿದ್ಯಾರ್ಥಿ ಸಮ್ಮೇಳನ
ಮಂಗಳೂರು: ಕೆ.ಎಸ್.ಎ ಮಂಗಳೂರು ವತಿಯಿಂದ 2025ರ ಫೆಬ್ರವರಿ 2ರಂದು ಮಂಗಳೂರಿನ ಪುರಭವನದಲ್ಲಿ ಟೀನ್ಸ್ ಸ್ಪೇಸ್ ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸುತ್ತಿದೆ.
ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದರೂ ಯುವ ಸಮೂಹ ನೈತಿಕ ಅಧಃಪತನದತ್ತ ಚಲಿಸುತ್ತಿದೆ. ಅಶ್ಲೀಲತೆ, ಮಾದಕ ದ್ರವ್ಯ ಮತ್ತು ಅಂಧ ವಿಶ್ವಾಸಗಳ ದಾಸರಾಗುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಸತ್ಯ ಮತ್ತು ನೈತಿಕತೆಯ ದಾರಿಯನ್ನು ತೋರಿಸಿ ಕೊಡುವ ಮಹತ್ತರ ಉದ್ದೇಶದೊಂದಿಗೆ 2025ರ ಫೆಬ್ರವರಿ 2ರಂದು ಮಂಗಳೂರಿನ ಪುರಭವನದಲ್ಲಿ ಟೀನ್ಸ್ ಸ್ಪೇಸ್ ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದರ ಘೋಷಣೆಯನ್ನು ನ.1ರಂದು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮೌಲವಿ ಯಾಸಿರ್ ಅಲ್ ಹಿಕಮಿ, ಅಬ್ದುಲ್ಲಾ ಫರ್ಹಾನ್, ಡಾ. ಹಫೀಝ್ ಸ್ವಲಾಹಿ, ಇಜಾಝ್ ಸ್ವಲಾಹಿ ಮತ್ತು ಝುಬೈರ್ ಸಲಫಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಕೆ ಎಸ್ ಎ ಕೋಶಾಧಿಕಾರಿ ಸಯ್ಯದ್ ಶಾಝ್ ಮತ್ತು ಅಬ್ದುಲ್ ರಶೀದ್ ಎಂಜಿನಿಯರ್ ಉಪಸ್ಥಿತರಿದ್ದರು.