ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರ್ಯಾಗಿಂಗ್, ಡ್ರಗ್ಸ್ ವಿರೋಧಿ ಜಾಗೃತಿ ಕಾರ್ಯಕ್ರಮ
ಮಂಗಳೂರು: ಮಂಗಳೂರನ್ನು ಮಾದಕ ವ್ಯಸನ ಮುಕ್ತ ಪ್ರದೇಶವನ್ನಾಗಿ ಮಾಡಲು ಜಾಗೃತಿ ಮೂಡಿಸಲು, ಮಂಗಳೂರಿನ ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)ಯ ಅಂತರರಾಷ್ಟ್ರೀಯ ಸೆಮಿನಾರ್ ಹಾಲ್ನಲ್ಲಿ ರ್ಯಾಗಿಂಗ್ ಮತ್ತು ಡ್ರಗ್ಸ್ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಗಾಂವ್ಕರ್ ಅವರು ಮಾದಕ ದ್ರವ್ಯ ಸೇವನೆ ಮತ್ತು ರ್ಯಾಗಿಂಗ್ ನ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಾಜರಿದ್ದರು. BITಯ ಪ್ರಾಂಶುಪಾಲರಾದ ಡಾ.ಎಸ್.ಐ.ಮಂಜುರ್ ಬಾಷಾ ಸ್ವಾಗತಿಸಿದರು.
Next Story