ಮಂಗಳೂರು: ಕೆಸಿಎಫ್ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಮೇ 19: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ದಶಮಾನೋತ್ಸವ ಕಾರ್ಯಕ್ರಮಕ್ಕೆ ನಗರದ ಹೊರವಲಯದ ಅಡ್ಯಾರ್ ಗಾರ್ಡನ್ನಲ್ಲಿ ರವಿವಾರ ಬೆಳಗ್ಗೆ ಚಾಲನೆ ನೀಡಲಾಯಿತು.
ಕೆಸಿಎಫ್ ಅಂತರ್ರಾಷ್ಟ್ರೀಯ ವೇದಿಕೆಯ ಕೋಶಾಧಿಕಾರಿ ಅಅಲಿ ಮುಸ್ಲಿಯಾರ್ ಬಹರೈನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಬೇಕಲ್ ಉಸ್ತಾದ್ ಸ್ಥಾಪಿಸಿದ ಕೆಸಿಎಫ್ ಇಂದು ಪ್ರಪಂಚದ ನಾನಾ ದೇಶಗಳಿಗೆ ವ್ಯಾಪಿಸಿದ್ದು, ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ ಎಂದು ಹೇಳಿದರು.
ಭಾರತದ ಗ್ರಾಂಡ್ ಮುಫ್ತಿ, ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೆಸಿಎಫ್ ದಶಮಾನೋತ್ಸವ ನೆನಪಿಗಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೊರತರಲಾದ ನೆನಪಿನ ಸಂಚಿಕೆ 'ದಿ ಕೆಸಿಎಫ್' ಅನ್ನು ಅನಾವರಣಗೊಳಿಸಿದರು.
ಕೆಸಿಎಫ್ ದಶಮಾನೋತ್ಸವ ಸಮ್ಮೇಳನ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ರೈಸ್ಕೋ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ದಶಮಾನೋತ್ಸವ ಪ್ರಯುಕ್ತ 10 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಎ.ಪಿ.ಅಬೂಬಕರ್ ಮುಸ್ಲಿಯಾರ್ ದುಆಗೈದು ಶುಭ ಹಾರೈಸಿದರು.
ತಲಕ್ಕಿ ಶಿಹಾಬುದ್ದೀನ್ ತಂಙಳ್, ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಜಲಾಲುದ್ದೀನ್ ತಂಙಳ್ ಮಲ್ಜಅ ಅಬ್ದುರ್ರಹ್ಮಾನ್ ಶಹೀರ್ ತಂಙಳ್, ಜಮಲುಲೈಲಿ ಕಾಜೂರು ತಂಙಳ್, ಮುಷ್ತಾಕ್ ಚಟ್ಟಕ್ಕಲ್ ತಂಙಳ್,
ಸೈಯದ್ ಹಾಮೀಮ್ ತಂಙಳ್, ಇಸ್ಮಾಯೀಲ್ ತಂಙಳ್ ಉಜಿರೆ ನಿಖಾಹ್ ಗೆ ನೇತೃತ್ವ ವಹಿಸಿದ್ದರು.
ಅಬೂ ಸ್ವಾಲಿಹ್ ಸಖಾಫಿ ಪೂನೂರು ನಿಖಾಹ್ ಖುತ್ಬಾ ನಿರ್ವಹಿಸಿದರು.
ಕೆಎಂಜೆ ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಇಬ್ರಾಹೀಂ ಮದನಿ ಪ್ರಧಾನ ಭಾಷಣ ಮಾಡಿದರು.
ಎಸ್ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ದಿಕ್ಸೂಚಿ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಶುಭ ಹಾರೈಸಿದರು.
ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ, ವಳವೂರು ಮುಹಮ್ಮದ್ ಸಅದಿ, ಕೆಸಿಎಫ್ ಅಂತಾರಾಷ್ಟ್ರೀಯ ವೇದಿಕೆಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಖಾಸಿಂ ಮದನಿ ಕರಾಯ, ಹುಸೈನ್ ಮುಸ್ಲಿಯಾರ್ ಎರ್ಮಾಡು ಕುವೈತ್, ಕೆದುಂಬಾಡಿ ಇಬ್ರಾಹೀಂ ಸಖಾಫಿ ದುಬೈ, ಉಮರ್ ಸಖಾಫಿ ಮಿತ್ತೂರು, ಯು.ಕೆ.ಅಬ್ದುಲ್ಲಾ ಬೈಕಂಪಾಡಿ, ಯು.ಕೆ.ಹಬೀಬ್ ಕೋಯ, ಫಾರೂಕ್ ಕಾಟಿಪಳ್ಳ, ಅಶ್ರಫ್ ಸಅದಿ ಮಲ್ಲೂರ್, ಅಶ್ರಫ್ ಸಅದಿ ಮಲ್ಲೂರು, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಮುಹಮ್ಮದ್ ಹಾಜಿ ಸಾಗರ, ನವಾಝ್ ಹಾಜಿ ಬಳ್ಳಾರಿ, ಅಬ್ದುರ್ರವೂಫ್ ಸುಲ್ತಾನ್, ಎನ್.ಎಸ್.ಅಬ್ದುಲ್ಲಾ ಕೋಬರ್, ಜಮಾಲುದ್ದೀನ್ ವಿಟ್ಲ ಬಹರೈನ್, ಉಸ್ಮಾನ್ ಹಾಜಿ ನಾಪೊಕ್ಲು, ಎಸ್. ಎಂ.ರಶೀದ್ ಹಾಜಿ, ಅಬ್ದುಲ್ ಹಕೀಂ ತುರ್ಕಳಿಕೆ ಉಪಸ್ಥಿತರಿದ್ದರು.
ಅಸ್ಸೈಯದ್ ಝೈನುಲ್ ಆಬಿದೀನ್ ಎಮ್ಮೆಮಾಡು ಒಮನ್ ಸ್ವಾಗತಿಸಿದರು. ಜಿ.ಎಂ.ಸುಲೈಮಾನ್ ಹಾಫಿಳ್ ಅಲ್ ಹಿಮಮಿ ಕಿರಾಅತ್ ಪಠಿಸಿದರು.
ಸಮ್ಮೇಳನ ಸ್ವಾಗತ ಸಮಿತಿಯ ನಿರ್ವಾಹಕ ಕಾರ್ಯದರ್ಶಿ ಸಲೀಂ ಕನ್ಯಾಡಿ ವಂದಿಸಿದರು. ಮಹಮ್ಮದ್ ಆಶಿಕ್ ಮುಳ್ಳ್ಹರಿ ಎಚ್ಕಲ್ಲು ಮತ್ತು ಮುಹಮ್ಮದ್ ಜುನೈದ್ ಅದನಿ ಕಾರ್ಯಕ್ರಮ ರೂಪಿಸಿದರು.