ಮಂಗಳೂರು: ವಿದ್ಯಾರ್ಥಿ ನಾಪತ್ತೆ
ಮಂಗಳೂರು: ನಗರದ ಮೂಡುಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ ನಿತಿನ್ ಬೆಲ್ಚಡ (19) ಎಂಬವರು ನಾಪತ್ತೆಯಾಗಿರುವ ಘಟನೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಮಂಗಳ ಕಾಲೇಜು ಪ್ಯಾರಾಮೆಡಿಕಲ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತಿನ್ ಬೆಲ್ಚಡ ಅವರು ಫೆಬ್ರವರಿ 13ರಂದು ಕಾಲೇಜ್‍ನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ನಿತಿನ್ ಬೆಲ್ಚಡ ಅವರು 5 ಅಡಿ 5 ಇಂಚು ಉದ್ದ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಕಾಣೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಇವರು ಕಂಡು ಬಂದಲ್ಲಿ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
Next Story