ಮಂಗಳೂರು | ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡಿಸಿ ಉಲಾಯಿಬೆಟ್ಟು ಸಾಲೇ ಕೇಂದ್ರ ಜುಮಾ ಮಸೀದಿ ವತಿಯಿಂದ ಪ್ರತಿಭಟನೆ

ಮಂಗಳೂರು : ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಸಾಲೇ ಕೇಂದ್ರ ಜುಮಾ ಮಸೀದಿ ಉಲಾಯಿಬೆಟ್ಟು ಜಮಾಅತ್ ವತಿಯಿಂದ ಜುಮಾ ನಮಾಜಿನ ಬಳಿಕ ಮಸೀದಿ ಮುಂಭಾಗ ಜಮಾಅತ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಖತೀಬರಾದ ನಝೀರ್ ಅಝ್ಹರಿ ಅವರು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಭಯೋತ್ಪದನೆಗೆ ಧರ್ಮವಿಲ್ಲ. ಯಾರೇ ಮಾಡಿದರೂ ಅದನ್ನು ಮುಸ್ಲಿಂ ಸಮಾಜ ಒಪ್ಪಲ್ಲ. ಅಮಾಯಕರನ್ನು ಕೊಲ್ಲುವವರು ಸರ್ವ ಮನುಜರನ್ನು ಕೊಂದಂತಹ ಪಾಪಿಗಳು ಎಂಬ ಕುರಾನ್ ಸಂದೇಶವನ್ನು ನೆನಪಿದರು. ಭದ್ರತಾ ವೈಫಲ್ಯವನ್ನು ಮುಚ್ಚಿಡಲು ಕೆಲವು ಮಾಧ್ಯಮಗಳು ಮುಸ್ಲಿಮರ ವಿರುದ್ಧ ಸುಳ್ಳು ಸುದ್ಧಿ ಹರಡುತ್ತಿದೆ ಇದು ಖಂಡನೀಯ ಎಂದರು.
ಉಗ್ರರ ದಾಳಿಯ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣವಾದ ಶಿಕ್ಷೆ ವಿದಿಸಿ ಮಡಿದಂತಹ ಭಾರತೀಯ ನಿವಾಸಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು. ಜಮಾಅತಿನ ಆಡಳಿತ ಮಂಡಳಿ ಸದಸ್ಯರು, ಊರವರು, ಯುವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.