ಮಾಣಿ: ಸೋಶಿಯಲ್ ಇಖ್ವಾ ಫೆಡರೇಶನ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಕಾರ್ಯಾಗಾರ"
ಬಂಟ್ವಾಳ : ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಇನ್ಫೋಮೇಟ್ ಪೌಂಡೇಶನ್ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ "ಶೈಕ್ಷಣಿಕ ಕಾರ್ಯಾಗಾರ" ಕಾರ್ಯಕ್ರಮವು ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಜರುಗಿತು.
"ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯುವುದು ಹೇಗೆ" ಎಂಬ ವಿಷಯದಲ್ಲಿ ಉಪ್ಪಿನಂಗಡಿ ಜ್ಞಾನ ಭಾರತಿ ಪ್ರಾಂಶುಪಾಲ ಇಬ್ರಾಹಿಂ ಖಲೀಲ್ ಎಚ್ ತರಬೇತಿ ನೀಡಿದರು.
''ಎಸ್ಸೆಸ್ಸೆಲ್ಸಿ ನಂತರ ಮುಂದೇನು'' ಎಂಬ ವಿಷಯದ ಬಗ್ಗೆ ಹಿದಾಯ ಫೌಂಡೇಶನ್ ಯೂತ್ ವಿಂಗ್ ಮುಖ್ಯಸ್ಥ ಮುಹಮ್ಮದ್ ಹರ್ಫಾಝ್ ಮತ್ತು ಆಪ್ತ ಸಮಾಲೋಚಕಿ ಸಲೀಲಾ ಕಡಂಬು ಮಾಹಿತಿ ನೀಡಿದರು.
ಇನ್ಫೋಮೇಟ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಖಾದರ್ ನಾವೂರು ಸಮಾರೋಪ ಮಾತುಗಳನ್ನಾಡಿದರು. ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ರಹೀಂ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು. ವೇದಿಕೆಯಲ್ಲಿ ಹಮೀದ್ ಮಾಸ್ಟರ್ ಉಪಸ್ಥಿತರಿದ್ಧರು.
ರಶೀದ್ ನೀರಪಾದೆ ಸ್ವಾಗತಿಸಿ, ರಿಯಾಝ್ ಕಲ್ಲಾಜೆ ವಂದಿಸಿದರು. ಝೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು. ನವಾಝ್ ಇಂಜಿನಿಯರ್ ಮತ್ತು ಸಿದ್ಧೀಕ್ ನೆಡ್ಯಾಲ್ ಸಹಕರಿಸಿದರು.