ಮಂಜನಾಡಿ: ಫೆ.2 ರಿಂದ ಅಲ್ ಮದೀನ 30 ನೇ ವಾರ್ಷಿಕ, ಸನದುದಾನ ಸಮ್ಮೇಳನ
ಉಳ್ಳಾಲ: ಅಲ್ ಮದೀನ ಮಂಜನಾಡಿ ಇದರ 30 ನೇ ವಾರ್ಷಿಕ ಸನದುದಾನ ಸಮ್ಮೇಳನ ಫೆ.2 ರಿಂದ 5 ರವರೆಗೆ ಮಂಜನಾಡಿಯ ಅಲ್ ಮದೀನಾ ಯತೀಂಖಾನದ ಆವರಣದಲ್ಲಿ ನಡೆಯಲಿದೆ ಎಂದು ಕೆ.ಎಂ.ಕೆ ಮಂಜನಾಡಿ ಹೇಳಿದರು.
ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 2 ರಂದು ಸೈಯದ್ ಇಸ್ಮಾಯಿಲ್ ಸಅದಿ ತಂಙಳ್ ನೇತೃತ್ವದಲ್ಲಿ ಡಾ. ಇಫ್ತಿಕಾರ್ ಫರೀದ್ ಅಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಫೆ. 3 ರಂದು ನೂತನ ಭೋಜನಾಲಯ ಕಟ್ಟಡದ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಆಲಿ ನೆರವೇರಿಸಲಿದ್ದು, ಸಮ್ಮೇಳನದ ಉದ್ಘಾಟನೆಯನ್ನು ವಸತಿ ಸಚಿವ ಝಮೀರ್ ಅಹಮ್ಮದ್ ನೆರವೇರಿಸಲಿರುವರು. ಅಸಯ್ಯದ್ ಅಬ್ದುಲ್ ರಹಮಾನ್ ಸಾದಾತ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಸಂಸದ ನಳಿನ್ ಕಟೀಲ್, ಸಚಿವ ರಹಮಾನ್ ಖಾನ್, ಮಾಜಿ ಸಚಿವ ರಮಾನಾಥ ರೈ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಡಾ.ನಿಸಾರ್ ಅಹಮ್ಮದ್ ಭಾಗವಹಿಸಲಿದ್ದಾರೆ. ಮಧ್ಯಾಹ್ನ 7 ಜೋಡಿಯ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ತಿಳಿಸಿದರು.
ಫೆ. 4 ರಂದು ಬೆಳಿಗ್ಗೆ ಆರೋಗ್ಯ ಮತ್ತು ರಕ್ತದಾನ ಕಾರ್ಯಕ್ರಮ, ಮುತಅಲ್ಲಿಂ ಸಮಾವೇಶ ನಡೆಯಲಿದೆ. ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಇಸ್ಮಾಯಿಲ್ ಸಅದಿ ಮಾಚಾರ್, ಇಬ್ರಾಹಿಂ ಬಾಖವಿ ಮೇಲ್ಮುರಿ ತರಗತಿ ನಡೆಸಲಿದ್ದಾರೆ. ಮಧ್ಯಾಹ್ನ ನಡೆಯಲಿರುವ ಉಲಮಾ ಸಮ್ಮೇಳನದಲ್ಲಿಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ವೆಣ್ಣಕ್ಕೋಡ್ ಬಶೀರ್ ಫೈಝಿ ಚರ್ಚಾ ಕಮ್ಮಟ ನಡೆಸಲಿದ್ದಾರೆ. ಅಂದು ರಾತ್ರಿ ಅನುಸ್ಮರಣಾ ಸಮ್ಮೇಳನದಲ್ಲಿ ಕೆ.ಎಸ್ ಆಟಕೋಯ ತಂಙಳ್ ದುಆ ನೆರವೇರಿಸಲಿದ್ದು, ಸೈಯದ್ ಬಾಖವಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಇಬ್ರಾಹಿಂ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟಿಸಲಿದ್ದಾರೆ. ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಅನುಸ್ಮರಣಾ ಭಾಷಣ ಮಾಡಲಿದ್ದಾರೆ ಎಂದರು.
ಫೆ. 5 ರಂದು ಸೈಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ತಂಙಳ್ ಅವರಿಂದ ಸ್ಥಾನವಸ್ತ್ರ ವಿತರಣೆ, ಎಲ್. ಹೆಚ್ ಲತೀಫ್ ಸಅದಿ ಮೂಡಬಿದ್ರೆ ಅವರ ಅಧ್ಯಕ್ಷ ತೆಯಲ್ಲಿ ಆಲುಮ್ನಿ ಹಾಗೂ ಮರ್ಝೂಕಿ ಸಂಗಮ ನಡೆಯಲಿದೆ. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ನೇತೃತ್ವದಲ್ಲಿ ಕುವೈಟ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ, ಅನಿವಾಸಿ ಸಂಗಮ ಹಾಗೂ ಹಾಫಿಲ್ ಸ್ವಾದಿಕ್ ಫಾಳಿಲಿ ಗೂಡಲ್ಲೂರು ರವರಿಂದ ಬುರ್ದಾ ಮಜ್ಲಿಸ್ ನಡೆಯಲಿದೆ. ಎ.ಪಿ ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಸನದುದಾನ ಸಮಾರೋಪ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ, ಸಮ್ಮೇಳನ ಸಮಿತಿ ಕನ್ವೀನರ್ ಎನ್.ಎಸ್.ಕರೀಂ, ಫಾರೂಕ್ ಹಾಜಿ ಉಳ್ಳಾಲ, ಮಹಮ್ಮದ್ ಹಾಜಿ ಉಚ್ಚಿಲ, ನಿರ್ದೇಶಕ ಇಸ್ಮಾಯಿಲ್ ಅಂಜದಿ ಉಪಸ್ಥಿತರಿದ್ದರು.