ಮಂಜನಾಡಿ| ಗ್ಯಾಸ್ ದುರಂತದಿಂದ ತಾಯಿ, ಮಕ್ಕಳು ಮೃತ್ಯು ಪ್ರಕರಣ; ಸಿಎಂ ಸಿದ್ದರಾಮಯ್ಯ ಪರಿಹಾರ ಚೆಕ್ ವಿತರಣೆ
ಮಂಗಳೂರು: ಉಳ್ಳಾಲ ತಾಲ್ಲೂಕಿನ ಮಂಜನಾಡಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಮೃತಪಟ್ಟ ತಾಯಿ ಮತ್ತು ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪರಿಹಾರದ ಚೆಕ್ ವಿತರಿಸಿದರು.
ಗ್ಯಾಸ್ ದುರಂತದಿಂದ ಗಂಭೀರ ಗಾಯಗೊಂಡಿದ್ದ ಒಂದೇ ಕುಟುಂಬದ ಖತೀಜತ್ತುಲ್ ಖುಬ್ರ, ಝಲೈಕಾ ಮೆಹ್ದಿ, ಸಲ್ಮಾ ಮಝಿಯಾ ಎಂಬವರು ಮೃತಪಟ್ಟಿದ್ದರು. ಒಟ್ಟು 15 ಲಕ್ಷ ರೂ. ಮೊತ್ತದ ಚೆಕ್‌ನ್ನು ಕುಟುಂಬದ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ನೀಡಿದರು.
ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story