ಬ್ಯಾರೀಸ್ ಕಾಲೇಜಿನಲ್ಲಿ “ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಸೋಸಿಯೇಷನ್-2024” ಉದ್ಘಾಟನೆ
ಮಂಗಳೂರು: ಬ್ಯಾರೀಸ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸಂಘ “ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಸೋಸಿಯೇಷನ್ - MESA 2024” ಉದ್ಘಾಟನಾ ಸಮಾರಂಭವು ಬ್ಯಾರೀಸ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎನ್ ಐಟಿಕೆ ಸುರತ್ಕಲ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರ್ ಡಾ. ಜ್ಞಾನಶೇಖರನ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು, “Fluid Flow and Heat Transfer through Porous Structures” ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಅಸೋಸಿಯೇಷನ್ʼ ವಿಭಾಗದ 2024-25ನೇ ಸಾಲಿನ ಶೈಕ್ಷಣಿಕ ಪದಾಧಿಕಾರಿಗಳಿಗೆ MESA ಸಂಯೋಜಕರಾದ ಡಾ.ಇಮ್ರಾನ್ ಮೊಕಾಶಿ ಪ್ರಮಾಣವಚನ ಭೋದಿಸಿದರು.
ಡಾ.ಎಸ್.ಐ.ಮಂಜುರ್ ಬಾಷಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಪಠ್ಯೇತರ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
BEADS ಪ್ರಾಂಶುಪಾಲರಾದ ಖಲೀಲ್ ರಝಾಕ್ ಶೇಖ್, BIPUC ಪ್ರಾಂಶುಪಾಲರಾದ ಪ್ರೊ.ಅಬ್ದುಲ್ ಲತೀಫ್, ಬಿಐಟಿ-ಪಾಲಿಟೆಕ್ನಿಕ್ ವಿಭಾಗದ ನಿರ್ದೇಶಕರಾದ ಪ್ರೊ.ಪೃಥಿವಿರಾಜ್ ಎಂ, CSE ವಿಭಾಗದ ಡಾ.ಅಜೀಜ್ ಮುಸ್ತಫಾ, ಶ್ರೀಮತಿ ಅಶ್ವಿನಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಅರವಿಂದ್ ಕುಮಾರ್ ಮತ್ತು ಪ್ರೊ.ಮಂಜುನಾಥ್ ಇಚ್ಚಂಗಿಯವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ವಸಂತಕುಮಾರ್ ಸ್ವಾಗತಿಸಿದರು.
ಡಾ.ಸಂದೀಪ್ ನಂಬಿಯಾರ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋಕುಲದಾಸ್ ಧನ್ಯವಾದವನ್ನು ಸಮರ್ಪಿಸಿದರು.