ಹಿದಾಯ ಫೌಂಡೇಶನ್‌ನಿಂದ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು: ಹಿದಾಯ ಫೌಂಡೇಶನ್ ಮಂಗಳೂರು, ಮುಹಿಯುದ್ದೀನ್ ಜುಮಾ ಮಸ್ಜಿದ್, ಎಸ್ಕೆಎಸೆಸ್ಸೆಫ್ ಕಕ್ಕಿಂಜೆ, ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ರವಿವಾರ ಕಕ್ಕಿಂಜೆಯ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ದುಆಗೈದರು. ಶಿಬಿರದಲ್ಲಿ ೫೧೭ ಫಲಾನುಭವಿಗಳು ಸದುಪಯೋಗ ಪಡೆದುಕೊಂಡರು. ಆರೋಗ್ಯ ಸಮಸ್ಯೆಯಿರುವ ೪೦೦ ಮಂದಿಗೆ ಉಚಿತ ಔಷಧ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಸ್ಗರ್, ಯೆನೆಪೋಯ ಮೆಡಿಕಲ್ ಕಾಲೇಜ್ ಅಸೋಸಿಯೇಟ್ ಪ್ರೊಫೆಸರ್ ಅಶ್ವಿನಿ ಶೆಟ್ಟಿ, ಎಂ.ಜೆ.ಎಂ. ಸೇವಾ ಸಮಿತಿಯ ಅಧ್ಯಕ್ಷ ಅರೆಕ್ಕಲ್ ಇಬ್ರಾಹಿಂ, ಎಂಜೆಎಂ ಜಲಾಲಿಯಾ ನಗರ ಅಧ್ಯಕ್ಷ ಸಿದ್ದೀಕ್, ಎಂಜೆಎಂ ಇಸ್ಲಾಮಾಬಾದ್ ಅಧ್ಯಕ್ಷ ಸಿದ್ದೀಕ್ ಬ್ರೈಟ್, ಬಿಜೆಎಂ ಅಧ್ಯಕ್ಷ ಮೂಸಾ ಕುಂಞಿ ಬಲಿಪಾಯ, ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಶರೀಫ್ ಹೆಚ್.ಎ. ಭಾಗವಹಿಸಿದ್ದರು.
ಹಿದಾಯ ಫೌಂಡೇಶನ್‌ನ ಬಶೀರ್ ಟಿ.ಕೆ., ಇಕ್ಬಾಲ್ ಫರಂಗಿಪೇಟೆ, ಹಕೀಮ್ ಕಲಾಯಿ, ಬಿ.ಎಂ. ತುಂಬೆ, ಬಶೀರ್ ವಗ್ಗ, ಸಾದಿಕ್ ಹಸ್ಸನ್, ಹಮೀದ್ ಗೊಳ್ತಮಜಲು, ರಶೀದ್ ಕಕ್ಕಿಂಜೆ, ಇಲ್ಯಾಸ್ ಕಕ್ಕಿಂಜೆ, ಸಿಬ್ಬಂದಿಗಳಾದ ವಾಸಿಫ್ ಅಲಿ, ಝಹೀರ್, ಇಬ್ರಾಹಿಂ ಇರ್ಫಾನ್ ಮತ್ತಿತರರು ಭಾಗವಹಿಸಿದರು.