ಮೀಫ್ - ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟ: ಮೌಂಟೈನ್ ವ್ಯೂ ಪುತ್ತೂರು ವಿನ್ನರ್ಸ್, ಅನ್ಸಾರ್ ಸ್ಕೂಲ್ ಬಜ್ಪೆ ರನ್ನರ್ಸ್
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ವತಿಯಿಂದ ಉಭಯ ಜಿಲ್ಲೆಗಳ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾಟ ಕ್ರೆಸ್ಸೆಂಟ್ ಅಂತರಾಷ್ಟ್ರೀಯ ಶಾಲೆ ಕಾಪು ಕ್ರೀಡಾಂಗಣದಲ್ಲಿ ಅ.30 ಬುಧವಾರ ನಡೆಯಿತು.
ಕ್ರೆಸ್ಸೆಂಟ್ ಅಂತರಾಷ್ಟ್ರೀಯ ಶಾಲೆ ಕಾಪು ಇದರ ಅಧ್ಯಕ್ಷ ಶಂಸುದ್ದೀನ್ ಯೂಸುಫ್ ಸಾಹೇಬ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶನಾಝ್ ಬೇಗಮ್ ರವರ ಘನ ಉಪಸ್ಥಿತಿಯಲ್ಲಿ, ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪು ಕ್ಷೇತ್ರ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರ್ ಪ್ರಾಸ್ತಾವಿಕ ಭಾಷಣಗೈದರು. ಶಿಕ್ಷಕಿ ಲಕ್ಷ್ಮಿ ದೇವಿ ಸ್ವಾಗತಿಸಿ, ಶಿಕ್ಷಕಿ ಕನ್ಸಾ ಕಾರ್ಯಕ್ರಮ ನಿರ್ವಹಿಸಿ, ರೇಖಾ ವಂದಿಸಿದರು.
ಪಂದ್ಯಾಕೂಟದ ಪ್ರಾಯೋಜಕತ್ವವನ್ನು ಕ್ರೆಸ್ಸೆಂಟ್ ಅಂತರಾಷ್ಟ್ರೀಯ ಶಾಲೆ ಕಾಪು ನಿರ್ವಹಿಸಿದ್ದು ಇದರ ಉಸ್ತುವಾರಿಯನ್ನು ಆಡಳಿತಾಧಿಕಾರಿ ನವಾಬ್ ಹಸ್ಸನ್ , ಪ್ರಾಂಶುಪಾಲ ಅಕ್ಬರ್ ಅಲಿ ಮತ್ತು ಉಪ ಪ್ರಾಂಶುಪಾಲ ಗುರುದತ್ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಖಾಝಿ, ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್, ಕಾರ್ಯದರ್ಶಿ ಅನ್ವರ್ ಹುಸೈನ್, ಅಡ್ವೋಕೇಟ್ ಉಮರ್ ಫಾರೂಖ್, ಪರ್ವೇಝ್ ಅಲಿ, ಶೈಖ್ ರಹ್ಮತುಲ್ಲಾಹ್, ಸಿರಾಜ್ ಮಣೆಗಾರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಾರೋಪ ಸಮಾರಂಭ ದಲ್ಲಿ ಚಾಂಪಿಯನ್ ಶಿಪ್ ಟ್ರೋಫಿ, ಪದಕ ಮತ್ತು ಪ್ರಶಸ್ತಿ ಪತ್ರ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು. ಉಭಯ ಜಿಲ್ಲೆಗಳ ವಿವಿಧ ವಿದ್ಯಾ ಸಂಸ್ಥೆಗಳ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಂದ್ಯಾಟದ ಫಲಿತಾಂಶ:
ಪ್ರಥಮ: ಮೌಂಟೈನ್ ವ್ಯೂ ಪುತ್ತೂರು , ದ್ವಿತೀಯ: ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ ಬಜ್ಪೆ, ಉತ್ತಮ ಆಲ್ ರೌಂಡರ್: ಮಹಮ್ಮದ್ - ಅನ್ಸಾರ್ ಸ್ಕೂಲ್ ಬಜ್ಪೆ. ಬೆಸ್ಟ್ ಪ್ಲೇಯರ್: ಮಹಮ್ಮದ್ ಝೈದ್ - ಮೌಂಟೈನ್ ವ್ಯೂ ಪುತ್ತೂರು, ಬೆಸ್ಟ್ ಅಟ್ಯಾಕರ್: ಮಹಮ್ಮದ್ ಮುಫೀಝ್ -ಮೌಂಟೈನ್ ವ್ಯೂ ಪುತ್ತೂರು, ಬೆಸ್ಟ್ ಸೆಟ್ಟರ್: ಕುಶಾಲ್ - ನೋಬಲ್ ಆಂಗ್ಲ ಮಾಧ್ಯಮ ಶಾಲೆ ಕುಂಜತ್ ಬೈಲ್ ಪ್ರಶಸ್ತಿ ಪಡೆದುಕೊಂಡರು.