ಕರಾವಳಿ ಜಿಲ್ಲೆಯಲ್ಲಿ ಮೊಳವಳ್ಳಿ ಶಿವರಾಯರ ಸಹಕಾರಿ ಕ್ರಾಂತಿ ಅವಿಸ್ಮರಣೀಯ: ವಸಂತ್ ಬರ್ನಾಡ್
ಹಳೆಯಂಗಡಿ: ಸಹಕಾರಿ ವ್ಯವಸ್ಥೆಗಳನ್ನು ಹುಟ್ಟುಹಾಕಿ ಕರಾವಳಿ ಜಿಲ್ಲೆಯ ಜನತೆಗೆ ಸ್ವಾಭಿಮಾನದ ಬದುಕನ್ನು ನಡೆಸಲು ಕಾರಣಿಕರ್ತರಾದ ಮೊಳವಳ್ಳಿ ಶಿವರಾಯರ ನೆನಪುಗಳು ಸಹಕಾರಿ ಕ್ಷೇತ್ರದಲ್ಲಿ ಅವಿಸ್ಮರಣೆಯ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ ಬರ್ನಾಡ್ ಹೇಳಿದ್ದಾರೆ.
ಸಹಕಾರಿ ಸಪ್ತಾಹದ ಪ್ರಯುಕ್ತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಳವಳ್ಳಿ ಶಿವರಾಯರು ರೂಪಿಸಿದ ಸಹಕಾರ ತತ್ವಗಳು ಸ್ಥಳೀಯವಾಗಿ ವ್ಯಾಪಾರ, ಕೃಷಿ ಹಾಗೂ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಕ್ಕೆ ಪೂರಕವಾಗಿದೆ ಎಂದರು.
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಅಬಿಷ್ಟ ಜೈನ್ ರಕ್ಷಿತಾ ಮತ್ತು ಲತೇಶ್ ಭಾಗವಹಿಸಿದ್ದರು. ಕಚೇರಿಯ ಹಿರಿಯ ಸಿಬ್ಬಂದಿ ಮೋಹನ ದಾಸ್ ಸ್ವಾಗತಿಸಿರು. ಪ್ರಧಾನ ಕಚೇರಿಯ ಸಿಬಂದಿ ಲೋಲಾಕ್ಷಿ ವಂದಿಸಿದರು.
Next Story