ಮೊಂಟೆಪದವು: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 2005-06 ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಕೂಟ
ಮೊಂಟೆಪದವು: ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿ 2005-06 ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ರೀಯೂನಿಯನ್ ಸ್ನೇಹ ಕೂಟವು ಇತ್ತೀಚೆಗೆ ನಡೆಯಿತು.
ಸರ್ಕಾರಿ ಪ್ರೌಢ ಶಾಲೆ ಮೊಂಟೆಪದವಿನಲ್ಲಿ ಕಲಿತು ಸುಮಾರು ಹದಿನೆಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದುಗೂಡಿದ ಸಹಪಾಠಿ ಮಿತ್ರರು ಪರಸ್ಪರ ನೆನಪುಗಳನ್ನು ಹಂಚಿಕೊಂಡರು.
ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಟಿ. ಎನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕರಾದ ನಾರಾಯಣ ಕೆ, ಮತ್ತು ಲಕ್ಷ್ಮಣ್ ಪೂಜಾರಿ ಎಸ್ ರವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿಂದಿ ಶಿಕ್ಷಕ ಜಿತೇಂದ್ರ ಸರ್ ಮತ್ತು ತುಳಸಿ ಮೇಡಮ್ ನೆನಪುಗಳನ್ನು ಹಂಚಿಕೊಂಡು ಮಾರ್ಗದರ್ಶನ ನೀಡಿದರು.
ಪ್ರಮೀಳಾ ಡಿಸೋಜಾ ತಂಡದವರು ನಾಡಗೀತೆ ಹಾಡಿದರು. ಅಗಲಿದ ಗೆಳೆಯರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಫಾತಿಮಾ ಮಸೂದ್, ಸುನೈರಾ, ಶಾಫಿ, ಶಾಕಿರ್, ಸಿರಾಜ್, ಅನ್ಸಾರ್, ಮಜೀದ್, ಶಿಹಾಬ್, ರೋಹಿತ್ ನೌಫಲ್, ನೌಶಾನ ಅತಿಥಿತಿಗಳಿಗೆ ಕಿರುಕಾಣಿಕೆ ನೀಡಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ನಡೆಯಿತು.
ಹಳೆ ವಿದ್ಯಾರ್ಥಿ ಮತ್ತು ಶಿಕ್ಷಕಿಯಾಗಿರುವ ದಿಲ್ಶಾನ ಅತಿಥಿಗಳನ್ನು ಸ್ವಾಗತಿಸಿದರು. ಅಶೀರುದ್ದೀನ್ ಮಾಸ್ಟರ್ ಸಾರ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.