ಮೂಡುಬಿದಿರೆ: ಪೊಲೀಸ್ ವಸತಿಗೃಹಕ್ಕೆ ಶಿಲಾನ್ಯಾಸ
ಮೂಡುಬಿದಿರೆ: ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೂರು ಅಂತಸ್ತಿನ ನೂತನ ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಶುಕ್ರವಾರ ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಉಮಾನಾಥ್ ಕೋಟ್ಯಾನ್ ಅವರು, ಮೂರು ಅಂತಸ್ತಿನಲ್ಲಿ ಒಟ್ಟು 12 ವಸತಿಗೃಹಗಳು ನಿರ್ಮಾಣವಾಗಲಿದ್ದು, ಪೊಲೀಸ್ ಕುಟುಂಬಕ್ಕೆ ಸಹಕಾರಿಯಾಗಲಿದೆ. ಮುಂದೆ ಹಂತಹಂತವಾಗಿ ಪೊಲೀಸರ ಬೇಡಿಕೆಯಂತೆ ವಸತಿಗೃಹಗಳಿಗೆ ಆದ್ಯತೆ ನೀಡಲಾಗುವುದು. ಪೊಲೀಸ್ ಸಿಬ್ಬಂದಿಗಳ ಕೊರತೆ ಬಗ್ಗೆಯೂ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದರು.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ಕೊರಗಪ್ಪ,ಸುರೇಶ್ ಪ್ರಭು, ಕರೀಮ್, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಎಸ್.ಐ, ಕೃಷ್ಣಪ್ಪ, ಎಸ್.ಐ.ಸಿದ್ದಪ್ಪ, ಎ.ಎಸ್ಸೈ ರಾಜೇಶ್ ಮತ್ತು ಸಿಬ್ಬಂದಿ ವರ್ಗ, ಪ್ರಮುಖರಾದ ರಾಜೇಶ್ ಕಡಲಕೆರೆ, ಕ್ಲಾರಿಯೋ, ಲಕ್ಷ್ಮಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.