ವಿದ್ಯಾರ್ಥಿ ವರುಣ್ ಡಿಕೋಸ್ಟಾಗೆ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ
ಮಂಗಳೂರು: ಥಾಯ್ಲೆಂಡ್‌ನಲ್ಲಿ ನಡೆದ ಜಾಗತಿಕ ಸ್ಪರ್ಧೆಯಲ್ಲಿ ಮಂಗಳೂರಿನ ಉದಯೋನ್ಮುಖ ಪ್ರತಿಭೆ 13ರ ಹರೆಯದ ವರುಣ್ ಡಿ’ಕೋಸ್ಟಾ ಅವರು ಪ್ರತಿಷ್ಠಿತ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಜ್ಪೆ ಸೈಂಟ್ ಜೋಸೆಫ್ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿಯಾಗಿರುವ ವರುಣ್ ಶೆಲ್ಡನ್ ಡಿ’ಕೋಸ್ಟಾ ಪ್ರಶಸ್ತಿಯೊಂದಿಗೆ ತವರಿಗೆ ಮಂಗಳವಾರ ಆಗಮಿಸಿದಾಗ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಹೆತ್ತವರಾದ ವಿನ್ಸೆಂಟ್ ಡಿ’ಕೋಸ್ಟಾ ಮತ್ತು ಲಿಡ್ವಿನ್ ಡಿ’ಕೋಸ್ಟಾ ಮತ್ತು ಸಹೋದರ ವಿನೋಲ್ ಡಿ’ಕೋಸ್ಟಾ ಬರಮಾಡಿಕೊಂಡರು.
ವರುಣ್ ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವಿನೊಂದಿಗೆ ವರುಣ್ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ರಾಷ್ಟ್ರ ಮಟ್ಟದ ಫ್ಯಾಷನ್ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಅ ಗೆಲುವು ಸಾಧಿಸಿದ್ದರು. ಇದರೊಂದಿಗೆ ಅವರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವವನ್ನು ಗಳಿಸಿದ್ದರು.
ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಈವೆಂಟ್ ಫ್ಯಾಷನ್, ಮಾಡೆಲಿಂಗ್ ಮತ್ತು ಪ್ರತಿಭೆಯನ್ನು ಒಳಗೊಂಡ ಜಾಗತಿಕ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಾಗಿದೆ. ಈ ವರ್ಷದ ಈವೆಂಟ್‌ನಲ್ಲಿ ಯುನೈಟೆಡ್ ಸ್ಟೇಟ್ಸ್, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಮಲೇಶ್ಯ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಮತ್ತಿತರ ದೇಶಗಳ ಸ್ಪರ್ಧಾಗಳು ಭಾಗವಹಿಸಿದ್ದರು. ವರುಣ್ ಈಗಾಗಲೇ ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಮಿಂಚಿದ್ದಾರೆ. ಜಾಹೀರಾತು ಚಿತ್ರಣಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದಾರೆ.