ಮುಲ್ಕಿ: ಕ್ರಿಕೆಟ್ ಬೆಟ್ಟಿಂಗ್ ನಿರತ ಇಬ್ಬರು ಆರೋಪಿಗಳ ಬಂಧನ

ಮುಲ್ಕಿ: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪದಲ್ಲಿ ಮುಲ್ಕಿ ಪೊಲೀಸರು ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಹಳೆಯಂಗಡಿ ಎಂಬಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಹಳೆಯಂಗಡಿ ಕೊಪ್ಪಳ ನಿವಾಸಿ ಇಂದ್ರೇಶ್ (28) ಎಂಬಾತನನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೊಬೈಲ್ ಫೋನ್ ಹಾಗೂ ಜನರಿಂದ ಸಂಗ್ರಹಿಸಿದ್ದ 2,400 ರೂ. ವಶಕ್ಕೆ ಪಡೆದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಾರ್ನಾಡು ಎಂಬಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತವಾಗಿದ್ದ ಸುರತ್ಕಲ್ ಕಾನಕಟ್ಲ ನಿವಾಸಿ ಕಲ್ಲಪ್ಪ ಭಜಂತ್ರಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆತನಿಂದ ಜೂಜಿಗೆ ಬಳಸಿದ್ದ 1 ಮೊಬೈಲ್ ಫೋನ್ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ್ದ 2,100 ರೂ. ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story