ಪರಸ್ಪರ ನೆರವು ನೀಡುವ ಉತ್ತಮ ಸಮಾಜ ನಿರ್ಮಾಣ ಅಗತ್ಯ: ಕಮಿಷನರ್ ಕುಲದೀಪ್ ಕುಮಾರ್ ಜೈನ್
ಮಂಗಳೂರು,ಆ.17;ಸಂಕಷ್ಟ ದಲ್ಲಿ ರುವ ಕುಟುಂಬ ಗಳಿಗೆ ಪರಸ್ಪರ ನೆರವು ನೀಡುವ ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆ ಯಾಗಿದೆ ಎಂದುಮಂಗಳೂರು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ರುವ ಲಯನ್ಸ್ ಲಿಂಬ್ ಸೆಂಟರ್ ಕೇಂದ್ರದಲ್ಲಿ ಬ್ಯಾಂಕ್ ಆಫ್ ಬರೋಡಾ ಪ್ರಾಯೋ ಜಕತ್ವ ದಲ್ಲಿ ಕೃತಕ ಕಾಲುಗಳನ್ನು ವಿತರಿಸುವ ಕಾರ್ಯಕ್ರಮ ವನ್ನು ದ್ದೇಶಿಸಿ ಮಾತನಾಡುತ್ತಿದ್ದರು.
ನಮ್ಮ ಸಮಾಜದಲ್ಲಿ ಸಾಕಷ್ಟು ಮಂದಿ ವಿವಿಧ ಸಂಕಷ್ಟಕ್ಕೆ ಈಡಾದವರಿದ್ದಾವರಿಗೆ ಅವರಿಗೆ ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ನೆರವು ಸಮಾಜದಿಂದ ದೊರೆಯಬೇಕಾಗಿದೆ ಈ ನಿಟ್ಟಿನಲ್ಲಿ ವೆನ್ಲಾಕ್ ಲಿಂಬ್ ಸೆಂಟರ್ ಹಾಗೂ ಇತರ ಸಂಸ್ಥೆಗಳ ನೆರವಿನಿಂದ ಅರ್ಹರಿಗೆ ಕೃತಕ ಅಂಗಗಳನ್ನು ಜೋಡಿ ಸಲು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್ ಜೈನ್,ಬ್ಯಾಂಕ್ ಆಫ್ ಬರೋಡಾ ದ ವಲಯದ ಮುಖ್ಯಸ್ಥ ರಾದ ಗಾಯತ್ರಿ ಆರ್,ಪ್ರಾಂತ್ಯದ ಮುಖ್ಯ ಸ್ಥರಾದ ಪ್ರಸಾದ್, ಉದ್ಯಮಿ ಸಾಂಬ ಶಿವರಾವ್ ಕೃತಕ ಕಾಲುಗಳನ್ನು ಫಾತಿಮಾ ಮಂಜನಾಡಿ, ಮನೋಜ್ ಕಾರ್ಕಳ ಮತ್ತು ಹರೀಶ್ ಬಿ.ಸಿ.ರೋಡ್ ರವರಿಗೆ ವಿತರಿಸಿದರು.
ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ನ ದ.ಕ ಜಿಲ್ಲಾ ಘಟಕದ ಆಡಳಿತ ನಿರ್ದೇಶಕರಾದ ಪಿ.ಬಿ.ಹರೀಶ್ ಪ್ರಾಸ್ತಾವಿ ಕವಾಗಿ ಮಾತನಾಡಿದರು,ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿ ಸಿದರು.ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ವಂದಿಸಿದರು.
ಸಮಾರಂಭದಲ್ಲಿ ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ದ.ಕ ಇಂಡಿಯನ್ ರೆಡ್ ಕ್ರಾಸ್ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಹಿರಿಯ ಸದಸ್ಯರಾದ ರವೀಂದ್ರನಾಥ ಉಚ್ಚಿಲ್, ಬ್ಯಾಂಕ್ ಆಫ್ ಬರೋಡಾದ ಶಾಖಾ ಪ್ರಬಂಧಕರಾದ ವಿಶ್ವ ನಾಥ ರೈ,ಸುವಾಸ್ ಅಂಚನ್,ಮಾರ್ಕೆಟಿಂಗ್ ಅಧಿಕಾರಿ ಗೌತಮ್,ಪತ್ರ ಕರ್ತರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮಂಗಳಾ ನರ್ಸಿಂಗ್ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು.