ನೇರಳಕಟ್ಟೆ : ಮಿಲಾದ್ ಕಮಿಟಿ ವಾರ್ಷಿಕ ಮಹಾಸಭೆ; ಅಬ್ಬಾಸ್ ನೇರಳಕಟ್ಟೆ ನೂತನ ಅಧ್ಯಕ್ಷ
ಬಂಟ್ವಾಳ : ಮಿಲಾದ್ ಕಮಿಟಿ ನೇರಳಕಟ್ಟೆ ಇದರ ವಾರ್ಷಿಕ ಮಹಾಸಭೆಯು ನೇರಳಕಟ್ಟೆ ಬದ್ರಿಯಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.
ಕಮಿಟಿ ಅಧ್ಯಕ್ಷ ನವಾಝ್ ಭಗವಂತ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮಾತನಾಡಿ ಸಂಘ ಸಂಸ್ಥೆಗಳ ಪುರೋಗತಿಯಲ್ಲಿ ಸರ್ವ ಸದಸ್ಯರ ಸಹಕಾರ ಅತೀ ಅಗತ್ಯ, ಸಂಘದಲ್ಲಿ ಸ್ಥಾನವನ್ನು ಅಲಂಕರಿಸಿದವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ ವಾರ್ಷಿಕ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಝಕರಿಯಾ ಅಸ್ಲಮಿ ಮರ್ದಾಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ ಮದರಸ ವಿದ್ಯಾರ್ಥಿಗಳಾದ ಅಬ್ದುಲ್ ಮಾಹಿಝ್, ಮುಹಮ್ಮದ್ ಅಫ್ಲಲ್, ಮುಹಮ್ಮದ್ ಅನೂನ್, ಶಮ್ಮಾಸ್, ಶಾಹಿಂ ಖಲೀಲ್, ಶಾಮಿಲ್, ಫಾಹಿಝ್, ಇಬಾನ್ ಹಾಗೂ ಅಯಾನ್ ಅವರನ್ನು ಅಭಿನಂದಿಸಲಾಯಿತು.
ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಮಿಲಾದ್ ಕಮಿಟಿಯ ನೂತನ ಅಧ್ಯಕ್ಷರಾಗಿ ಅಬ್ಬಾಸ್ ನೇರಳಕಟ್ಟೆ, ಉಪಾಧ್ಯಕ್ಷರಾಗಿ ಇಂಜಿನಿಯರ್ ಫಾರೂಕ್, ಪ್ರಧಾನ ಕಾರ್ಯದರ್ಶಿ ಯಾಗಿ ಇಲ್ಯಾಸ್ ನೇರಳಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ನವಾಝ್ ಭಗವಂತ ಕೋಡಿ, ಸಮದ್ ನೇರಳಕಟ್ಟೆ, ಸಮದ್ ಪರ್ಲೋಟ್ಟು ಹಾಗೂ ಕೋಶಾಧಿಕಾರಿಯಾಗಿ ಅತಾವುಲ್ಲಾ ನೇರಳಕಟ್ಟೆ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎಸ್.ಎಂ.ರಫೀಕ್ ಹಾಜಿ, ಸಾಹುಲ್ ಹಮೀದ್ ಎನ್.ಎ, ಉಸ್ಮಾನ್ ನೆಡ್ಯಾಲ್, ಹಂಝ ಎನ್.ಕೆ, ಆಸಿಫ್ ನೇರಳಕಟ್ಟೆ, ಸಮ್ಮಾಸ್, ಸವಾದ್, ಮುನೀರ್ ಕೆಂಪುಗುಡ್ಡೆ, ಖಲಂದರ್ ಹಾಗೂ ನಿಝಾಮ್ ಅವರನ್ನು ಆರಿಸಲಾಯಿತು.