ವಿದ್ಯುತ್ ಗುತ್ತಿಗೆದಾರ ಸಂಘ ಬಂಟ್ವಾಳ ಉಪ ಸಮಿತಿಯ ನೂತನ ಅಧ್ಯಕ್ಷರಾಗಿ ಜೋಕಿಂ ವಿಲಿಯಮ್ ಮೆನೆಜಸ್
ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ರಿ. ಬೆಂಗಳೂರು ಇದರ ಬಂಟ್ವಾಳ ಉಪಸಮಿತಿಯ 2023 - 26 ಸಾಲಿನ ನೂತನ ಅಧ್ಯಕ್ಷರಾಗಿ ಜೋಕಿಂ ವಿಲಿಯಮ್ ಮೆನೆಜಸ್ ಆಯ್ಕೆಯಾದರು.
ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಘದ ದ.ಕ. ಜಿಲ್ಲಾಧ್ಯಕ್ಷ ಕುಶಲ ಪೂಜಾರಿ ನಡೆಸಿಕೊಟ್ಟರು.
ಉಪಾಧ್ಯಕ್ಷರುಗಳಾಗಿ ಪದ್ಮನಾಭ ಮಯ್ಯ , ಇಬ್ರಾಹಿಂ ಸೂಫಿ ಸಜಿಪ, ಕಾರ್ಯದರ್ಶಿಯಾಗಿ ಎ.ಹೆಚ್. ಅಬ್ದುಲ್ ಸಲಾಂ, ಜತೆ ಕಾರ್ಯದರ್ಶಿಯಾಗಿ ಯೋಗೇಶ್, ಕೋಶಾಧಿಕಾರಿಯಾಗಿ ರವಿಚಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಸ್ಟೇನಿ ಡಿಕುನ್ಹಾ ಆಯ್ಕೆಯಾದರು.
ಪದ್ಮನಾಭ ಮಯ್ಯ ಸ್ವಾಗತಿಸಿ, ಯೂಸುಫ್ ವಂದಿಸಿದರು. ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.
Next Story