ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ: ಎಸ್.ಪಿ.ಹಂಝ ಸಖಾಫಿ ಕರೆ
ಪುತ್ತೂರು, ಡಿ.6: ಸಮಾಜದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ, ವಿಧ್ಯಾಭ್ಯಾಸಕ್ಕೆ ಒತ್ತುಕೊಟ್ಟು ಉಲಮಾಗಳ ನೇತೃತ್ವದಲ್ಲಿ ನಾಡಿನ ಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರೆ ನಾಡು ಅಭಿವೃದ್ಧಿ ಹೊಂದಬಹುದು. ಆ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಕಾರ್ಯರೂಪಕ್ಕೆ ಇಳಿಯಬೇಕು ಎಂದು ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್. ಪಿ. ಹಂಝ ಸಖಾಫಿ ಹೇಳಿದ್ದಾರೆ.
ಅವರು ಮಂಗಳವಾರ ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ 'ಮ್ಯಾಗ್ನೆಟ್ ಕ್ಯಾಂಪ್ ನಾಯಕರ ಸಂಗಮ' ಕಾರ್ಯಕ್ರಮದಲ್ಲಿ ಮುಖ್ಯ ತರಗತಿ ನೀಡಿದರು.
ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ಬಿ. ಪಿ. ಇಸ್ಮಾಯಿಲ್ ಹಾಜಿ ಬೈತಡ್ಕ ಉದ್ಘಾಟಿಸಿದರು. ಸುನ್ನಿ ಫೈಝಿ ದುಆಗೈದರು.
ಮುಶಾವರ ಸದಸ್ಯರಾದ ಅಬ್ದುಲ್ ಜಲೀಲ್ ಸಖಾಫಿ, ಸೈಯದ್ ಶರಫುದ್ದೀನ್ ತಂಙಳ್ ವೇಣೂರು , ಅಬೂಬಕರ್ ಸಅದಿ ಮಜೂರು, ಪಿ.ಯು.ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಾವೂರು, ಅಬ್ದುಲ್ಲ ಮುಸ್ಲಿಯಾರ್ ಬನ್ನೂರು, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಅಬ್ಬಾಸ್ ಮದನಿ ಬಂಡಾಡಿ, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಜಿ. ಮುಹಮ್ಮದ್ ಕುಂಞಿ, ಇಕ್ಬಾಲ್ ಬಪ್ಪಳಿಗೆ, ಹನೀಫ್ ಹಾಜಿ ಇಂದ್ರಾಜೆ, ಉಸ್ಮಾನ್ ಹಾಜಿ ಸೆರ್ಕಳ ಹಾಗೂ ಉಮರ್ ತಾಜ್ ನೆಲ್ಯಾಡಿ ಉಪಸ್ಥಿತರಿದ್ದರು.
ಸೈಯದ್ ಎಸ್. ಎಂ. ತಂಙಳ್ ಉಜಿರೆ, ಕೆ.ಬಿ.ಕಾಸಿಂ ಹಾಜಿ ಮಿತ್ತೂರು, ಉಮರ್ ಮುಸ್ಲಿಯಾರ್ ಮರ್ಧಾಳ, ಇಬ್ರಾಹಿಂ ಸಖಾಫಿ ಕೊಡುಂಗಾಯಿ, ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ಅಬ್ಬಾಸ್ ಬಟ್ಲಡ್ಕ ಜಿಲ್ಲಾ ವ್ಯಾಪ್ತಿಯಲ್ಲಿರುವ ಝೋನುಗಳ ಮಾಹಿತಿ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ.ಎಂ ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಖಾಸಿಂ ಪದ್ಮುಂಜ ವಂದಿಸಿದರು.