ಮಾಸ್ಟರ್ ಶೆಫ್ ಮುಹಮ್ಮದ್ ಆಶಿಕ್ ಸಾಧನೆ ಯುವ ಜನತೆಗೆ ಪ್ರೇರಣೆ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಸಣ್ಣ ಪ್ರಯತ್ನಗಳು ದೊಡ್ಡ ಸಾಧನೆಯನ್ನು ಮಾಡಲು ಪ್ರೇರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹೇಳಿದ್ದಾರೆ.
ಅವರು ‘ಮಾಸ್ಟರ್ ಶೆಫ್ ಇಂಡಿಯಾ’ ವಿಜೇತ ಮಂಗಳೂರಿನ ಮುಹಮ್ಮದ್ ಆಶಿಕ್‌ಗೆ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಭಿನಂದಿಸಿ ಮಾತನಾಡಿದರು. ಆಶಿಕ್ ಸಾಧನೆ ಮಂಗಳೂರಿಗೆ ಮಾತ್ರವಲ್ಲ, ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.
‘ಮಾಸ್ಟರ್ ಶೆಫ್ ಇಂಡಿಯಾ’ದ ಕೊನೆಯ ಫಲಿತಾಂಶದ ಕ್ಷಣಗಳನ್ನು ಜಿಲ್ಲಾಧಿಕಾರಿಯವರು ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಿದರು. ನಂತರ ಆಶಿಕ್ ಅವರ ಜೊತೆ ಮಾತನಾಡಿ ಅವರ ಹವ್ಯಾಸ, ಆಸಕ್ತಿ ಪ್ರೇರಣೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Next Story